ನಾರ್ಣಕಜೆ : ಅಪರಿಚಿತ ವೃದ್ಧೆಯನ್ನು ಹಿಡಿದು ನಿಲ್ಲಿಸಿದ ಪಂಚಾಯತ್ ನವರು

0

ಸೋಣಂಗೇರಿ – ಗುತ್ತಿಗಾರು ರಸ್ತೆಯ ನಾರ್ಣಕಜೆ‌ ಎಂಬಲ್ಲಿ ಅಪರಿಚಿತ ವೃದ್ಧೆಯೊಬ್ಬರನ್ನು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ನಿಲ್ಲಿಸಿ ವಿಚಾರಿಸಿದ ಘಟನೆ ನಡೆದಿದೆ.

ಎಲಿಮಲೆ ಕಡೆಯಿಂದ ಗಾಬರಿಯಿಂದ ಓಡಿಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಹಿಡಿದು‌ ನಿಲ್ಲಿಸಿ ವಿಚಾರಿಸಿ ದಾಗ ಯಾವುದೇ ಮಾಹಿತಿ ನೀಡಿಲ್ಲವೆಂದೂ, ಬಳಿಕ ವೃದ್ಧೆಯನ್ನು ಪಂಚಾಯತ್ ನಲ್ಲಿ‌ ಕುಳ್ಳಿರಿಸಿ ಸುಳ್ಯ ಪೋಲೀಸರಿಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವೃದ್ದೆಯ ಸಂಬಂಧ ದವರು ಅಥವಾ ಪರಿಚಯಸ್ಥರು ಇದ್ದರೆ ವೃದ್ಧೆಯನ್ನು ಕರೆದುಕೊಂಡು ಹೋಗುವಂತೆ ಪಂಚಾಯತ್ ಅಧ್ಯಕ್ಷೆ ಶೀಲಾವತಿಯವರು ತಿಳಿಸಿದ್ದಾರೆ.