ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ

0

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ (ಮನೆ ಮನೆಗೆ ಗಂಗೆ) ಯೋಜನೆಯಡಿಯಲ್ಲಿ ಮಂಜೂರಾದ 1.30 ಕೋಟಿ ಅನುದಾನದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ನ 423 ಮನೆಗಳಿಗೆ ಕುಡಿಯುವ ನೀರು ಪೂರೈಕೆಗೆ ಅನುದಾನ, ಪೆರುವಾಜೆ ಗ್ರಾಮದ ಮಠತ್ತಡ್ಕ ಪರಿಶಿಷ್ಟ ಕಾಲೋನಿಗೆ ರೂಪಾಯಿ 10 ಲಕ್ಷ ಅನುದಾನ ಹಾಗೂ ಪೆರುವಾಜೆ- ಮುರ್ಕೆತ್ತಿ ಸಂಪರ್ಕ ರಸ್ತೆಗೆ ರೂಪಾಯಿ 40 ಲಕ್ಷ ಅನುದಾನದ ಕಾಮಗಾರಿಗಳಿಗೆ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರು ಹಾಗೂ ಸುಳ್ಯ ಶಾಸಕರಾದ ಎಸ್. ಅಂಗಾರ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ ತೀರ್ಥರಾಮ, ಬಿ.ಜೆ.ಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಬಿ.ಜೆ.ಪಿ ಬೆಳ್ಳಾರೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ನಡುಬೈಲು,ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, , ಬಿ.ಜೆ.ಪಿ ಬೆಳ್ಳಾರೆ ಮಹಾ ಶಕ್ತಿ ಕೇಂದ್ರದ ಯುವ ಮೋರ್ಚಾ ಅಧ್ಯಕ್ಷ ಹರ್ಷಿತ್ ಪೆರುವಾಜೆ, ಪ್ರಮುಖರಾದ , ಪೆರುವಾಜೆ ಶ್ರೀ ಜಲದುರ್ಗಾ ದೇವೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ
ಪದ್ಮನಾಭ ಶೆಟ್ಟಿ ಪೆರುವಾಜೆ, ಸದಸ್ಯರಾದ ಜಯಪ್ರಕಾಶ್ ರೈ, ಗ್ರಾಮ ಪಂಚಾಯತ್ ಸದಸ್ಯರಾದ ಮಾಧವ ಮುಂಡಾಜೆ, ರೇವತಿ ಮಠತ್ತಡ್ಕ, ಪೆರುವಾಜೆ ಬೂತ್ ಅಧ್ಯಕ್ಷರಾದ ರಮೇಶ್ ಮಠತ್ತಡ್ಕ , ಭಾಗೀರಥಿ ಮುರುಳ್ಯ, ಹಾಗೂ ಪಕ್ಷದ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಶಿವಪ್ರಸಾದ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.