ಜ. 7 ರಿಂದ 8: ಬಳ್ಪ ನೀರಜರಿ ನೇಮೋತ್ಸವ

0

ಬಳ್ಪ ಗ್ರಾಮದ ನೀರಜರಿ ಶ್ರೀ ನಾಗಬ್ರಹ್ಮ ಆದಿ ಮೊಗೆರ್ಕಳ ದೈವಸ್ಥಾನದಲ್ಲಿ 9ನೇ ವರ್ಷದ ದೈವಗಳ ನೇಮೋತ್ಸವ ಜ. 7 ಮತ್ತು 8ರಂದು ನಡೆಯಲಿದೆ.
ಜ. 7ರಂದು ಬೆಳಿಗ್ಗೆ 8.00 ಗಂಟೆಗೆ ಗಣಹೋಮ ನಡೆಯಲಿದೆ. ಸಂಜೆ 6.00 ಶ್ರೀ ಧರ್ಮಶಾಸ್ತಾ ಭಜನಾ‌ ಮಂಡಳಿ ಬಳ್ಪ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 7.00ಗಂಟೆಗೆ ಗುಳಿಗ ದೈವದ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ಬಳಿಕ 10.00 ಗಂಟೆಗೆ ಮೊಗೇರ್ಕಳ ಗರಡಿ ಇಳಿಯುವುದು, ರಾತ್ರಿ 12.00 ಗಂಟೆಗೆ ತನ್ನಿ ಮಾಣಿಗ ಗರಡಿ ಇಳಿಯುವುದು ನಡೆಯಲಿದೆ. ಜ. 9ರಂದು ಬೆಳಿಗ್ಗೆ 6.00 ಗಂಟೆಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಗಂಧ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ.