ಪುರುಷೋತ್ತಮ ಅಮ್ಮಣ್ಣಾಯ ಮುಡ್ನೂರು ನಿಧನ

0

ಬಳ್ಪ ಗ್ರಾಮದಸುಳದಿ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಅಮ್ಮಣ್ಣಾಯ ಅಸೌಖ್ಯದಿಂದ ಜ. 3ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಇವರಿಗೆ 67 ವರ್ಷ ವಯಸ್ಸಾಗಿತ್ತು.

ಇವರು ಬಳ್ಪ ಪ್ರಾ.ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ್ದರಲ್ಲದೆ ಯಕ್ಷಗಾನ ಅರ್ಥಧಾರಿಯಾಗಿದ್ದರು.

ಮೃತರು ಪತ್ನಿ ಶ್ರೀಮತಿ ವಸಂತಿ, ಪುತ್ರ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಅಭಿಷೇಕ್ ಅಮ್ಮಣ್ಣಾಯ, ಸಹೋದರರಾದ ಟಿ.ವಿ.ಎಸ್. ಕಂಪನಿಯ ನಿವೃತ್ತ ಉದ್ಯೋಗಿ ಸುಬ್ರಾಯ ಅಮ್ಮಣ್ಣಾಯ ಪುತ್ತೂರು, ಕರ್ನಾಟಕ ಬ್ಯಾಂಕಿನ ನಿವೃತ್ತ ಉದ್ಯೋಗಿ ಗೋಪಾಲ ಅಮ್ಮಣ್ಣಾಯ ಬಳ್ಪ, ಸಹೋದರಿಯರಾದ ಶ್ರೀಮತಿ ರತ್ನಾ, ಶ್ರೀಮತಿ ಪದ್ಮಾಕ್ಷಿ ಬಳ್ಪ, ಶ್ರೀಮತಿ ಪ್ರೇಮ ಕಾಪು, ಸೊಸೆ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಶ್ರೀಮತಿ ದಿವ್ಯಾ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.