ತೇಜಶ್ರೀ ಕೆ.ಬಿ ಕಡಪಳ ಪದವೀಧರ ಚಿತ್ರ ಕಲಾ ಶಿಕ್ಷಕಿಯಾಗಿ ಪುತ್ತೂರು ಮೊರಾರ್ಜಿ ಶಾಲೆಗೆ ನೇಮಕ

0

ಅಮರಮುಡ್ನೂರು ಗ್ರಾಮದ ಬಾಜಿನಡ್ಕ ನಿವಾಸಿ ತೇಜಶ್ರೀ ಕೆ.ಬಿ ಕಡಪಳ ಪದವೀಧರ ಚಿತ್ರ ಕಲಾ ಶಿಕ್ಷಕಿಯಾಗಿ ಸರ್ಕಾರದಿಂದ ನೇಮಕವಾಗಿದ್ದಾರೆ. ಪುತ್ತೂರು ಬಲ್ನಾಡು ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿರುವ ಇವರು 2016 ರ ಕರ್ನಾಟಕ ಲೋಕ ಸೇವಾ ಆಯೋಗದ ಅಧಿಸೂಚನೆಯಂತೆ ನೇಮಕಾತಿ ನಡೆದಿದೆ. ತೇಜಶ್ರೀ ಅವರು ನಾರ್ಣಕಜೆ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಎಲಿಮಲೆ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಸ.ಪ.ಪೂ.ಕಾಲೇಜು ಸುಳ್ಯ ಇಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿರುತ್ತಾರೆ. ಮಂಗಳೂರಿನ ಮಹಾಲಾಸಾ ಚಿತ್ರಕಲಾ ಕಾಲೇಜಿನಲ್ಲಿ ಚಿತ್ರಕಲಾ ಪದವಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತೇಜಶ್ರೀ ಅವರು ಕಡಪಳ ಬಾಲಕೃಷ್ಣ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರಿ.