ವಳಲಂಬೆ: ಶಂಕುಸ್ಥಾಪನೆ, ರಸ್ತೆ ಉದ್ಘಾಟನೆ, ಸಭಾ ಕಾರ್ಯಕ್ರಮ

0

ಗುತ್ತಿಗಾರು ಗ್ರಾ. ಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಶಂಕುಸ್ಥಾಪನೆ ಮಾಡಿ, ಕೆಲ ಕಾಮಗಾರಿಗಳನ್ನು ಸಚಿವ ಎಸ್ ಅಂಗಾರ ಉದ್ಘಾಟಿಸಿದರು.

ಅಡ್ಡನಪಾರೆ ರಸ್ತೆ ಹಾಗೂ ತಡೆಗೋಡೆ ರಸ್ತೆ ಉದ್ಘಾಟಿಸಲಾಯಿತು. ಪೈಕ ಕುಂಬಾರಕೇರಿ ರಸ್ತೆಯ 30 ಲಕ್ಷದ ಕಾಂಕ್ರೀಟ್ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಬಳಿಕ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ
ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮವನ್ನು ಮಾಡಲಾಯಿತು.

ವೇದಿಕೆಯಲ್ಲಿ ಮೀನುಗಾರಿಕಾ ಮತ್ತು ಬಂದರು ಸಚಿವರಾದ ಎಸ್ ಅಂಗಾರ, ಗ್ರಾ.ಪಂ ಅಧ್ಯಕ್ಷೆ ರೇವತಿ ಆಚಳ್ಳಿ,
ವಳಲಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಕಡ್ತಲ್ ಕಜೆ, ಗ್ರಾ.ಪಂ ಸದಸ್ಯರುಗಳಾದ ವೆಂಕಟ್ ವಳಲಂಬೆ, ಮಾಯಿಲಪ್ಪ ಕೊಂಬೆಟ್ಟು, ವಿಜಯ್ ಚಾರ್ಮತ, ಹರೀಶ್ ಕೊಯಿಲ, ಸುಮಿತ್ರಾ ಮೂಕಮಲೆ,ಬಿಜೆಪಿಯ ವಿನಯ್ ಮುಳುಗಾಡು, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ರವೀಂದ್ರ ಹೊಸೊಳಿಕೆ, ಕಾರ್ಯದರ್ಶಿ ಹರಿಶ್ಚಂದ್ರ ಕೇಪಳಕಜೆ ಉಪಸ್ಥಿತರಿದ್ದರು. ಜಯಪ್ರಕಾಶ್ ಮೊಗ್ರ ಸ್ವಾಗತಿಸಿ ಸಂದೀಪ್ ಮೊಟ್ಟೆಮನೆ ವಂದಿಸಿದರು. ಕಿಶೋರ್‍ ಕುಮಾರ್ ಪೈಕ ಬೊಮ್ಮದೆರೆ ಕಾರ್ಯಕ್ರಮ ನಿರೂಪಿಸಿದರು.