ಪಂಜ:ಪಲ್ಲೋಡಿ ಕೆಸರ್ ದ್ದ ಪರ್ಬ-2023

0

ಶ್ರೀ ಉಳ್ಳಾಕುಲು ಕಲಾ ರಂಗ ಪಲ್ಲೋಡಿ ಪಂಜ ಇದರ ವತಿಯಿಂದ ಪಲ್ಲೋಡಿ ಕೆಸರ್ ದ್ದ ಪರ್ಬ-2023 ಜ.15 ರಂದು ಜರುಗಿತು. ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ವಾಚಣ್ಣ ಗೌಡ ಜಾಕೆ ಉದ್ಘಾಟಿಸಿದರು. ಕಲಾರಂಗದ ಉಪಾಧ್ಯಕ್ಷ ಬಾಲಕೃಷ್ಣ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್, ಸಮರ್ಪಣಾ ನಿಧಿಗೆ ಉಪ ವಲಯ ಅರಣ್ಯ ಅಧಿಕಾರಿ ಸಂತೋಷ್ ಕುಮಾರ್ ರೈ ಚಾಲನೆ ನೀಡಿದರು. ಗದ್ದೆಯ ಸ್ಥಳ ದಾನಿ ಆಲ್ಪೋನ್ಸ್ ಕರ್ನೊಲಿಯೋ, ಕಲಾ ರಂಗದ ಗೌರವಾಧ್ಯಕ್ಷ ನೇಮಿರಾಜ ಪಲ್ಲೋಡಿ,ಅಧ್ಯಕ್ಷ ಕವನ್ ಪಲ್ಲೋಡಿ, ಕಾರ್ಯದರ್ಶಿ ಪ್ರದೀಪ್ ಪಲ್ಲೋಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ನಮಿತಾ ಅಶೋಕ್ ಪ್ರಾರ್ಥಿಸಿದರು
ಪ್ರಜೀತ್ ಪಲ್ಲೋಡಿ ಸ್ವಾಗತಿಸಿದರು. ಪ್ರಕಾಶ್ ಜಾಕೆ ಪ್ರಾಸ್ತಾವಿಕ ಗೈದು ಸ್ವಾಗತಿಸಿದರು. ಧನ್ಯಾತ ಬಾಲಕೃಷ್ಣಪಲ್ಲೋಡಿ ನಿರೂಪಿಸಿದರು. ದೇವಿ ಪ್ರಸಾದ್ ಪಲ್ಲೋಡಿ ವಂದಿಸಿದರು.

ಸಮಾರೋಪ: ಸಂಜೆ ಸಮಾರಂಭ ಸಮಾರಂಭದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ ಬಹುಮಾನ ವಿತರಣೆ ಮಾಡಿದರು. ಕಲಾ ರಂಗದ ಉಪಾಧ್ಯಕ್ಷ ಬಾಲಕೃಷ್ಣ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜೇಸಿಐ ಪಂಜ ಪಂಚಶ್ರೀ ನಿಕಟಪೂರ್ವಾಧ್ಯಕ್ಷ
ಶಿವಪ್ರಸಾದ್ ಹಾಲೆಮಜಲು,ಕಲಾ ರಂಗದ ಗೌರವಾಧ್ಯಕ್ಷ ನೇಮಿರಾಜ ಪಲ್ಲೋಡಿ,ಅಧ್ಯಕ್ಷ ಕವನ್ ಪಲ್ಲೋಡಿ, ಕಾರ್ಯದರ್ಶಿ ಪ್ರದೀಪ್ ಪಲ್ಲೋಡಿ, ಗದ್ದೆಯ ಸ್ಥಳ ದಾನಿ ಆಲ್ಪೋನ್ಸ್ ಕರ್ನೊಲಿಯೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೀವನ್ ಪಲ್ಲೋಡಿ ಸ್ವಾಗತಿಸಿದರು.ಸತೀಶ್ ಪಲ್ಲೋಡಿ ಪ್ರಸ್ತಾವನೆ ಗೈದರು. ಪ್ರದೀಪ್ ಪಲ್ಲೋಡಿ ವಂದಿಸಿದರು.
ಹೆಸರುಗದ್ದೆಯಲ್ಲಿ ಓಟ, ಹಗ್ಗ ಜಗ್ಗಾಟ ಸೇರಿದಂತೆ ಅನೇಕ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ನಡೆಯಿತು.ಮುಕ್ತ ಹಗ್ಗಜಗ್ಗಾಟ ಪುರುಷರು ಶ್ರೀ ಮಹಾಲಿಂಗೇಶ್ವರ ಪುತ್ತೂರು ಪ್ರಥಮ,
ಸಾಸ್ತಾರ ನೆಲ್ಯಾಡಿ ದ್ವಿತೀಯ
ಮಹಿಳೆಯರು ಚಾಮುಂಡೇಶ್ವರಿ ಪಲ್ಲೋಡಿ ,ಗ್ರಾಮ ವಿಕಾಸ ಒಡಿಯೂರು ಸಂಘ ಐವತ್ತೋಕ್ಲು ದ್ವಿತೀಯ ಸ್ಥಾನ ಗಳಿಸಿತು.