ಸುಳ್ಯ ಬಂಟರ ಭವನದಲ್ಲಿ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಮತ್ತು ಯೋಜನಾಧಿಕಾರಿ ಯವರಿಗೆ ಅಭಿನಂದನೆ

0

ಸುಳ್ಯ ಕೇರ್ಪಳದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಂಟರ ಸಮುದಾಯ ಭವನಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ರೂ.5 ಲಕ್ಷ ಸಹಾಯ ಧನ ಒದಗಿಸಿದ್ದು‌ ಬಂಟರ ಸಂಘದ ವತಿಯಿಂದ ಕ್ಷೇತ್ರದ ಪರವಾಗಿ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಹಾಗೂ ಯೋಜನಾಧಿಕಾರಿ ನಾಗೇಶ್ ಪಿ‌ ಯವರನ್ನು ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಯವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಜೆ.ಕೆ.ರೈ , ಕುಸುಮಾಧರ ರೈ ಬೂಡು, ರಾಜೇಶ್ ರೈ ಉಬರಡ್ಕ ರವರು ಉಪಸ್ಥಿತರಿದ್ದರು.