ಜ: 18ರ ತನಕ ನೇರ್ಪು ಶ್ರೀ ಉಳ್ಳಾಕುಲು, ಶಿರಾಡಿ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಬಳ್ಪ, ಕೇನ್ಯ ಗ್ರಾಮ ದೈವ ನೇರ್ಪು ಮಾಲ್ಯಾದ ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಜ. 16ರಂದು ಆರಂಭಗೊಂಡಿತು.
ಜ. 16ರಂದು ರಾತ್ರಿ ಶ್ರೀ ಉಳ್ಳಾಕುಲು ದೈವದ ಭಂಡಾರ ತೆಗೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ಜ. 17ರಂದು ಪ್ರಾತಃಕಾಲ ಮಲ್ಲ ಉಳ್ಳಾಕುಲು ನೇಮೋತ್ಸವ ನಡೆಯಿತು.

ಬಳಿಕ ಎಲ್ಯ ಉಳ್ಳಾಕುಲು, ಉಳ್ಳಾಲ್ತಿ, ಮೈಸಂದಾಯ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ 7.30ರಿಂದ ಶ್ರೀ ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ಭಂಡಾರ ತೆಗೆದು ಪರಿವಾರ ದೈವಗಳ ನೇಮ, ಪ್ರಸಾದ ವಿತರಣೆ ನಡೆಯಲಿದೆ. ಜ. 18ರಂದು ಬೆಳಿಗ್ಗೆ 6.30ರಿಂದ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ, ಮಧ್ಯಾಹ್ನ 12.00 ಗಂಟೆಗೆ ಗಡಿಗೆ ಹೋಗುವುದು ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.