ಜ.23 – 24 : ಚಿಲ್ತಡ್ಕ ಉಳ್ಳಾಕುಲು ಕುಮಾರ ದೈವಗಳ ನೇಮೋತ್ಸವ

0


ನಾಲ್ಕೂರು ಗ್ರಾಮದ ಚಿಲ್ತಡ್ಕ ಎಂಬಲ್ಲಿರುವ ಗ್ರಾಮ ದೈವಗಳಾದ ಶ್ರೀ ಉಳ್ಳಾಕುಲು ಕುಮಾರ ಹಾಗೂ ಪರಿವಾರದ ದೈವಗಳ ನೇಮೋತ್ಸವವು ಜ. ೨೩ರಿಂದ ೨೪ರ ವರೆಗೆ ನಡೆಯಲಿದೆ. ಜ. ೨೩ ರಂದು ರಾತ್ರಿ ಉಳ್ಳಾಕುಲು ಚಾವಡಿಯಿಂದ ಪನಿವಾರ ಮಾಡಕ್ಕೆ ಭಂಡಾರ ತಂದು ಜ. ೨೪ ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಉಳ್ಳಾಗಲು ಮತ್ತು ಕುಮಾರದೈವದ ನೇಮ, ನಂತರ ಕ್ರಮವಾಗಿ ಪುರುಷ ದೈವ ಮಲೆ ಚಾಮುಂಡಿ ಉಪದೈವವಗಳು ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ನಂತರ ಅಜ್ಜಿದೈವ ನೇಮ ನಡೆದು, ಗುಳಿಗ ದೈವದ ನೇಮ ನಂತರ ಅನ್ನಸಂತರ್ಪಣೆ ನಡೆಯಲಿದೆ. ನೇಮ ಉತ್ಸವಕ್ಕೆ ಕೂಡುಗಟ್ಟಿನ ಗ್ರಾಮದ ಭಕ್ತಾದಿಗಳು ಸಂಪ್ರದಾಯದಂತೆ ವಂತಿಗೆ ನೀಡುವುದು ಹಾಗೂ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವುದು ಹಿಂದಿನಂತೆ ನಡೆದುಕೊಂಡು ಬರುತ್ತಿದೆ ಕಾರ್ಯಕ್ರಮದಲ್ಲಿ ವಿಪತ್ತು ನಿರ್ವಹಣಾ ಘಟಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಾಲ್ಕೂರು ಹಾಗೂ ಇತರ ಸಂಘ ಸಂಸ್ಥೆಗಳು ಊರಿನ ನಾಗರಿಕರು ಸಹಕರಿಸುತ್ತಿದ್ದಾರೆ. (ವರದಿ ಡಿ..ಹೆಚ್)