ಪೆರಾಜೆ : ಜ್ಯೋತಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

0

ಪೆರಾಜೆ ಜ್ಯೋತಿ ಪ್ರೌಢಶಾಲೆ, ಜ್ಯೋತಿ ವಿದ್ಯಾಸಂಘ ಮತ್ತು ಜ್ಯೋತಿ ಹಿರಿಯ ವಿದ್ಯಾರ್ಥಿ ಸಂಘ ಇದರ ಜಂಟಿ ಆಶಯದಲ್ಲಿ ಜ. 14 ರಂದು ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಜ್ಯೋತಿ ಪ್ರೌಢಶಾಲೆ ಯಲ್ಲಿ ನಡೆಯಿತು.
ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷ ಎನ್. ಎ. ಜ್ಞಾನೇಶ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಶಾರದಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸ್ವರ್ಣ ಕಲಾಕೇಶ್ವರವರು ಮುಖ್ಯ ಭಾಷಣಗಾರರಾಗಿದ್ದರು.


ಮುಖ್ಯ ಅತಿಥಿಗಳಾಗಿ ಪೆರಾಜೆ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಳ್ಳಡ್ಕ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎ.ಜಿತೇಂದ್ರ, ಹಿರಿಯ ವಿದ್ಯಾರ್ಥಿ ಮಂಗಳೂರು ಪೊಲೀಸ್ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ ವಿಭಾಗದ ಇನ್ ಸ್ಪೆಕ್ಟರ್ ಎಂ. ಪಿ. ಸತೀಶ್, ಶಾಲಾ ಸಂಚಾಲಕ ಹರಿಶ್ಚಂದ್ರ ಮುಡುಕಜೆ, ಮುಖ್ಯ ಶಿಕ್ಷಕ ಎಂ.ಆರ್. ನರೇಂದ್ರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಚಂದ್ರ ಕುಂಬಳಚೇರಿ, ಶ್ರೀಮತಿ ವಿಧಾ ಕುಮಾರಿ ಬಂಗಾರಕೋಡಿ, ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಜ.4 ರಂದು ನಡೆದ ಪೋಷಕರ ಹಾಗೂ ಹಿರಿಯ ವಿದ್ಯಾರ್ಥಿಗಳ ಮತ್ತು ಶಾಲಾ ವಿದ್ಯಾರ್ಥಿಗಳ ಕ್ರೀಡೋತ್ಸವದ ಬಹುಮಾನ ವಿತರಿಸಲಾಯಿತು. ಹಾಗೂ 2022 ರ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಲಾಯಿತು. ಕ್ರೀಡಾ ವಿಜೇತರ ಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕ ನಿತಿನ್ ಎಂ.ಎಂ. ವಾಚಿಸಿದರು. ಸಹ ಶಿಕ್ಷಕಿ ಕು. ಸುಪರ್ಣ ಕೆ.ಎಸ್. ಸಾಂಸ್ಕೃತಿಕ ವಿಜೇತರ ಪಟ್ಟಿ ವಾಚಿಸಿದರು. ಸಹ ಶಿಕ್ಷಕ ನಾಗರಾಜ್ ಜಿ.ಆರ್. ದತ್ತಿನಿಧಿಗಳ ಪಟ್ಟಿ ವಾಚಿಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಹರಿಶ್ಚಂದ್ರ ಮುಡುಕಜೆ ಸ್ವಾಗತಿಸಿದರು. ನಾಗರಾಜ್ ಜಿ.ಆರ್. ವಂದಿಸಿ, ಶ್ರೀಮತಿ ಚಂದ್ರಮತಿ ಕುಂಬಳಚೇರಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವೃಂದದವರು, ನಿವೃತ್ತ ಶಿಕ್ಷಕರು, ಗ್ರಾಪಂ ಸದಸ್ಯರು, ಪೋಷಕ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.