ಸುಂದರ ನಾಯ್ಕ್ ಅರಂಬೂರು ವಿಷ ಸೇವಿಸಿ ಆತ್ಮಹತ್ಯೆ

0

ಆಲೆಟ್ಟಿ ಗ್ರಾಮದ ಅರಂಬೂರು ನಿವಾಸಿ ದಿ.ಬೊಳಿಯಪ್ಪ ನಾಯ್ಕ ರವರ ಪುತ್ರ ಸುಂದರ ನಾಯ್ಕ್ ಅರಂಬೂರು (42) ರವರು ತನ್ನ ಮನೆಯ ಕೊಟ್ಟಿಗೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ( ಜ.19 )ಇಂದು ವರದಿಯಾಗಿದೆ.
ಮೃತರು ಪತ್ನಿ ಶ್ರೀಮತಿ ಕವಿತಾ, ಪುತ್ರಿಯರಾದ ಸುಕನ್ಯಾ, ಕಾವ್ಯ ಮತ್ತು ಸಹೋದರರಾದ ಚಂದ್ರಶೇಖರ, ದಿನಕರ, ಚಿದಾನಂದ, ಸತೀಶ್ ಹಾಗೂ ಇಬ್ಬರು ಸಹೋದರಿಯನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕೃಷಿಕರಾಗಿದ್ದು ತೆಂಗಿನ ಕಾಯಿ ಸುಲಿಯುವ ಕೆಲಸದಲ್ಲಿ ಪರಿಣಿತರಾಗಿದ್ದರು.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸುಳ್ಯ ಪೋಲಿಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.