ದಕ್ಷಿಣ ಮತ್ತು ಮಧ್ಯ ಏಷ್ಯಾ ಮಟ್ಟದ ಲಯನ್ಸ್ ನಾಯಕತ್ವ ತರಬೇತಿಗಾಗಿ ಜಯರಾಂ ದೇರಪ್ಪಜ್ಜನಮನೆ ಢಾಕಾಕ್ಕೆ

0

ಜನವರಿ 27ರಿಂದ 29ರ ವರೆಗೆ ಬಾಂಗ್ಲಾದ ರಾಜಧಾನಿ ಢಾಕಾದ ಹೋಟೇಲ್ ಇಂಟರ್ ಕಾಂಟಿನೆಂಟಲ್ ಇಂಟರ್ ನ್ಯಾಶನಲ್ ನಲ್ಲಿ ನಡೆಯಲಿರುವ ಮೂರು ದಿನಗಳ ದಕ್ಷಿಣ ಮತ್ತು ಮಧ್ಯ ಏಷ್ಯಾ ಮಟ್ಟದ ಲಯನ್ಸ್ ನಾಯಕತ್ವ ತರಬೇತಿ (ALLI) ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಸುಳ್ಯ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಲಯನ್ ಜಯರಾಂ ದೇರಪ್ಪಜ್ಜನಮನೆಯವರು ಭಾಗವಹಿಸಲಿದ್ದಾರೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಕಂದಾಯ ಜಿಲ್ಲೆಯನ್ನೊಳಗೊಂಡ ಲಯನ್ ಜಿಲ್ಲೆಯಿಂದ ಈ ಪ್ರತಿಷ್ಡಿತ ತರಬೇತಿಗಾಗಿ ಮೂವರು ಆಯ್ಕೆಯಾಗಿದ್ದು ಈ ಪೈಕಿ ಜಯರಾಂ ದೇರಪ್ಪಜ್ಜನಮನೆ ಓರ್ವರಾಗಿದ್ದು 2021-22 ರಲ್ಲಿ ಗೋವಾದಲ್ಲಿ ನಡೆದ RLLI ತರಬೇತಿ ಶಿಬಿರದಲ್ಲೂ ಭಾಗವಹಿಸಿದ್ದರು. ಲಯನ್ ಜಿಲ್ಲೆಯಲ್ಲಿ ಈ ಹಿಂದೆ ವಲಯಾಧ್ಯಕ್ಷರಾಗಿ, ಪ್ರಾಂತೀಯ ಅಧ್ಯಕ್ಷರಾಗಿ, ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿದ್ದು ಪ್ರಕೃತ ಲಯನ್ ಜಿಲ್ಲೆ 317-D ಯ CQI ಜಿಲ್ಲಾ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.