ಸುಳ್ಯ: ಎನ್ನೆoಪಿಯುಸಿಯಲ್ಲಿ Tally ಪ್ರಮಾಣ ಪತ್ರ ವಿತರಣೆ ಮತ್ತು CA ಕೋರ್ಸ್ ಬಗ್ಗೆ ಮಾಹಿತಿ ಕಾರ್ಯಕ್ರಮ

0


ಪ್ರಸ್ತುತ ಲೆಕ್ಕ ಪರಿಶೋಧಕರು ಆಡಿಟಿಂಗ್ ಕರ್ತವ್ಯ , ತೆರಿಗೆ ಪ್ಲಾನಿಂಗ್ ಕ್ಷೇತ್ರ, ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೀಗೆ ವ್ಯವಹಾರದ ಎಲ್ಲಾ ಕ್ಷೇತ್ರಗಳಲ್ಲಿ ಲೆಕ್ಕ ಪರಿಶೋಧಕರ ಪಾತ್ರ ಮಹತ್ವದ್ದು ಎಂದು
ಕಾಲೇಜಿನ ಹಿರಿಯ ವಿದ್ಯಾರ್ಥಿನಿ CA ಸ್ನೇಹ ಪಿ.ಜಿ. ಹೇಳಿದರು ಅವರು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಆಯೋಜಿಸಿದ್ದ Tally ಸರ್ಟಿಫಿಕೇಟ್ ಕೋರ್ಸ್ ಇದರ ಪ್ರಮಾಣ ಪತ್ರ ವಿತರಣೆ ಮತ್ತು CA ಕೋರ್ಸ್ ಬಗ್ಗೆ ಮಾಹಿತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಈ ಸಂದರ್ಭದಲ್ಲಿ CA ಕೋರ್ಸ್ ನ ಹಂತಗಳು, ಈ ಪರೀಕ್ಷೆ ಪಾಸಾಗಲು ಬೇಕಾದ ಪೂರ್ವ ತಯಾರಿ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಸಾವಿತ್ರಿ ಕೆ, tally ಕೋರ್ಸ್ ತರಬೇತುದಾರರಾದ ಸಂಸ್ಥೆಯ ಸಂಖ್ಯಾ ಶಾಸ್ತ್ರ ಉಪನ್ಯಾಸಕಿ ಹರ್ಷಿತ ಎ.ಬಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಅಂಬಿಕಾ ಪ್ರಾರ್ಥಿಸಿ,
ದ್ವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶ್ರವಣ್ ಸ್ವಾಗತಿಸಿ,ಉಪನ್ಯಾಸಕಿ ಹರ್ಷಿತ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವಿದ್ಯಾರ್ಥಿಗಳಾದ ನಿಶಿತ್ ಎ.ಸಿ. ಅತಿಥಿಗಳನ್ನು ಪರಿಚಯಿಸಿದರು ವಿದ್ಯಾರ್ಥಿನಿ ಹೃಷಿತ ರಾವ್ ಅನಿಸಿಕೆ ವ್ಯಕ್ತಪಡಿಸಿದರು, ನಮಿಶ್ ವಂದಿಸಿ, ಪ್ರೀತೇಶ್ಎಂ ನಿರೂಪಿಸಿದರು.