ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತ ಸಂಭ್ರಮ

0

ಸಾಧನೆಯ ಪೈಪೋಟಿಯಿಂದ ಸಹಕಾರಿ ಸಂಘಗಳ ಅಭಿವೃದ್ಧಿ: ಸಚಿವ ಎಸ್. ಅಂಗಾರ

ವಿಕಸನಗೊಳ್ಳುತ್ತಿರುವ ಸಹಕಾರಿ ಸಂಘಗಳು : ಡಾ.ಎಂ.ಎನ್.ರಾಜೇಂದ್ರಕುಮಾರ್

ಸಹಕಾರ ವಿಶ್ವ ಮಾನವ ಮೌಲ್ಯದ ಜೀವಾಳ : ಒಡಿಯೂರು ಶ್ರೀ

ಸಹಕಾರಿ ಸಂಘಗಳು ತಮ್ಮ ಸಾಧನೆಯ ಪೈಪೋಟಿಯಿಂದ ಅಭಿವೃದ್ಧಿ ಸಾಧಿಸುತ್ತಿದೆ. ಮೂಲ ತತ್ವವನ್ನು ಮರೆಯದೆ ನಿರೀಕ್ಷೆಗೂ ಮೀರಿ ಸಾಧನೆ ಮಾಡುತ್ತಿದೆ
ಎಂದು ಸಚಿವ ಎಸ್.ಅಂಗಾರ ಹೇಳಿದರು.

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎರಡು ದಿನಗಳ ಶತ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಕೃತ ಬ್ಯಾಂಕ್ ಗಳು ಸಂಕುಚಿತಗೊಳ್ಳುತ್ತಿದ್ದರೆ, ಸಹಕಾರಿ ಸಂಘಗಳು ವಿಕಸನಗೊಳ್ಳುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಬಾಡಿಗೆ ಕಟ್ಟಡಗಳಲ್ಲಿದ್ದರೆ, ಸಹಕಾರಿ ಸಂಘಗಳು ಸ್ವಂತ ಕಟ್ಟಡದಲ್ಲಿದೆ. ಜನರು ಸಹಕಾರಿ ಸಂಘಗಳ ಮೇಲೆ ಇರಿಸಿದ ನಂಬಿಕೆಯೇ ಇದಕ್ಕೆ ಕಾರಣ. ಎಂದವರು ಹೇಳಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಂಪಾಜೆ ಸಹಕಾರಿ ಸಂಘಕ್ಕೆ ಹತ್ತು ಲಕ್ಷ ರೂಪಾಯಿ ಘೋಷಿಸಿದ ಡಾ. ಎಂ.ಎನ್.ಆರ್, ಅವರು, ನೂತನವಾದ ಶತಾಬ್ಧಿ ಆರೋಗ್ಯ ಸಾಂತ್ವಾನ ನಿಧಿಗೆ ವೈಯಕ್ತಿಕ ನೆಲೆಯಲ್ಲಿ 25 ಸಾವಿರ ನೀಡುವುದಾಗಿ ಪ್ರಕಟಿಸಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಯತಿವರ್ಯರಾದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು, ವಿಶ್ವ ಮಾನವ ಮೌಲ್ಯದ ಜೀವಾಳವೇ ಸಹಕಾರ. ಕೊಡು ಕೊಳ್ಳುವಿಕೆಯಲ್ಲಿ ಸಾಮರಸ್ಯ ಇದ್ದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ಇದೇ ಸಹಕಾರ ತತ್ವ. ಇದೊಂದು ರಾಷ್ಟ್ರೀಯ ಆದರ್ಶ. ಸಹಕಾರ ಜೀವದ ತತ್ವ, ಜೀವನದ ಜೀವಾಳ. ಈ ಶತ ಸಂಭ್ರಮ ಸಹಸ್ರ ಸಂಭ್ರಮಕ್ಕೆ ಮುನ್ನುಡಿಯಾಗಲಿ ಎಂದು ಆಶಿಸಿದರು.

ಕಲ್ಲುಗುಂಡಿಯ ಸಂತ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಧರ್ಮಗುರುಗಳಾದ ರೆ.ಫಾ. ಫಾವುಲ್ ಕ್ರಾಸ್ತಾ ಆಶೀರ್ವಚನ ನೀಡಿ, ಸಹಕಾರ ಭಾವನೆ ಬೆಳೆದರೆ ಸಮಾಜದ ಎಲ್ಲ ರಂಗಗಳೂ ಅಭಿವೃದ್ಧಿಯಾಗುತ್ತದೆ ಎಂದರು.

ಕಲ್ಲುಗುಂಡಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಅಹಮ್ಮದ್ ನಹಿಮ್ ಪೈಝಿ ಆಶೀರ್ವಚನ ನೀಡಿ, ಇತರರಿಗಾಗಿ ಬದುಕುವುದೇ ಸಹಕಾರ ತತ್ವ.‌ ಎಲ್ಲ ಭಿನ್ನತೆ ಮರೆತು ಪರಸ್ಪರ ಒಂದುಗೂಡಲು ಸಹಕಾರ ಉತ್ತಮ ಕ್ಷೇತ್ರ ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಂ ಭಟ್ ಶತಾಬ್ಧಿ ಅರೋಗ್ಯ ನಿಧಿ ಬಿಡುಗಡೆ ಮಾಡಿದರು. ಇಂಥಹ ಸದುದ್ದೇಶದ ಯೋಜನೆಗಳಿಗೆ ಸರ್ವರೂ ಸಹಕಾರಿ ನೀಡಬೇಕು ಎಂದು ಅವರು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು,
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್, ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್ ಹೆಚ್.ಎನ್., ಸೆಲ್ಕೋ ಸೋಲಾರ್ ಪ್ರೈ. ಲಿ. ಕಂಪೆನಿಯ ಸಿಇಒ ಮೋಹನ ಭಾಸ್ಕರ ಹೆಗಡೆ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಡಾ. ಎಂ.ಎನ್.ರಾಜೇಂದ್ರಕುಮಾರ್ , ಎಸ್.ಅಂಗಾರ, ನಿತ್ಯಾನಂದ ಮುಂಡೋಡಿ ಹಾಗೂ ಟಿ.ಶ್ಯಾಂ ಭಟ್‌ರವರನ್ನು ಸನ್ಮಾನಿಸಲಾಯಿತು.

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷರುಗಳಾದ ಪಿ.ಎನ್. ಗಣಪತಿ ಭಟ್, ಯು. ಅಯ್ಯಣ್ಣ, ಡಿ. ಆರ್. ನಾರಾಯಣ ರಾವ್, ಕೆ.ಪಿ.ಜಗದೀಶ್ ಅವರನ್ನು ಸನ್ಮಾನಿಸಲಾಯಿತು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ನಿತ್ಯಾನಂದ ಮುಂಡೋಡಿ, ಐವರ್ನಾಡು ಸೊಸೈಟಿ ಅಧ್ಯಕ್ಷ ಎಸ್.ಎನ್.‌ಮನ್ಮಥ, ಮರ್ಕಂಜ ಸೊಸೈಟಿ ಅಧ್ಯಕ್ಷ ರಮೇಶ್ ದೇಲಂಪಾಡಿ, ಮಡಪ್ಪಾಡಿ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಂ, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಕಲ್ಮಡ್ಕ ಸೊಸೈಟಿ ಅಧ್ಯಕ್ಷ ಉದಯಕುಮಾರ್ ಬೆಟ್ಟ ಅವರನ್ನು ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ರಾಜಾರಾಂ, ಡಾ. ಡಿ.ವಿ.ಲೀಲಾಧರ್, ದಾಮೋದರ ಮಾಸ್ತರ್, ಚಿದಾನಂದ ಮಾಸ್ತರ್, ಇಬ್ರಾಹಿಂ ಗೂನಡ್ಕ, ಡಾ. ಉಮ್ಮರ್ ಬೀಜದಕಟ್ಟೆ, ಸುಬ್ರಾಯ ಸಂಪಾಜೆ, ಟಿ.ಎಂ.ಶಹೀದ್, ಹೇಮಂತ್ ಸಂಪಾಜೆ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಸಾಧಕರಾದ ಲೋಕಯ್ಯ ಗೌಡ ಬೈಲೆ, ಕೆ.ವಿ.ಕುಸುಮಾಧರ, ರಾಮಚಂದ್ರ ಬೈಲೆ, ವೀರಪ್ಪ ಗೌಡ ದೋಳ, ವಿ.ವಿ.ಬಾಲನ್, ಯು.ಬಿ.ಚಕ್ರಪಾಣಿ , ಚಂದ್ರಶೇಖರ ಬಿ.ಕೆ. ಅವರನ್ನೂ ಗೌರವಿಸಲಾಯಿತು.

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಕರ ಕೊಯಿಂಗಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ವಂದಿಸಿದರು. ವೆಂಕಟ್ರಮಣ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರತವಹಣಾಧಿಕಾರಿ ಕೆ.ಟಿ. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಸಂಪಾಜೆ ಸೊಸೈಟಿ ಮಾಜಿ ಅಧ್ಯಕ್ಷ ಕೆ.ಪಿ.ಜಗದೀಶ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಪುತ್ಯ, ನಿರ್ದೇಶಕರುಗಳಾದ ಗಣಪತಿ ಭಟ್ ಪಿ.ಎನ್., ಆನಂದ ಪಿ.ಎಲ್., ಶ್ರೀಮತಿ ಉಷಾ ಕೆ.ಎನ್. ಶ್ರೀಮತಿ ಸುಮತಿ ಎಸ್., ಜಗದೀಶ್ ರೈ ಕೆ.ಆರ್. ಶ್ರೀಮತಿ ಯಮುನಾ ಬಿ.ಎಸ್., ಹಮೀದ್ ಎಚ್., ಕೆ.ಪಿ. ಜಾನಿ, ಚಂದ್ರಶೇಖರ ಕೆ.ಯು. ಪ್ರಕಾಶ್ ಕೆ.ಪಿ., ಶ್ರೀಮತಿ ರಾಜೀವಿ ಕೆ. ಉಪಸ್ಥಿತರಿದ್ದರು.