ಪರ ಊರಿನಲ್ಲಿರುವ ಸುಳ್ಯದವರು, ನ್ಯಾಯಾಧೀಶೆ ಶ್ರೀಮತಿ ಸವಿತಾ ಪಿ.ಆರ್ ರವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗೌರವ ಪ್ರಶಸ್ತಿ, *ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಪ್ರದಾನ*

0

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನ್ಯಾಯಾಂಗದಲ್ಲಿ ಕನ್ನಡ 2020 – 21 ಕಾರ್ಯಕ್ರಮದ ಅಂಗವಾಗಿ ನೀಡುವ ಪ್ರಶಸ್ತಿಗೆ ಜಿಲ್ಲಾ ಮತ್ತು ಸತ್ರ ಹಾಗೂ ಸಿವಿಲ್ ನ್ಯಾಯಾಲಯಗಳ ಮಟ್ಟದಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ 20 ನೇ ಹೆಚ್ಚುವರಿ ಹಾಗೂ ಲಘು ವ್ಯವಹಾರಗಳ ನ್ಯಾಯಾಧೀಶೆ ಶ್ರೀಮತಿ ಸವಿತಾ ಪಿ.ಆರ್ ರವರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಜ.22 ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಇಂಧನ ಸಚಿವ ಸುನಿಲ್ ಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಜಾಲ್ಸೂರಿನ ನೆಕ್ರಾಜೆ ಗುಡ್ಡಪ್ಪ ಗೌಡರ ಪುತ್ರ ತೀರ್ಥರಾಮ ನೆಕ್ರಾಜೆಯವರ ಪತ್ನಿಯಾಗಿರುವ ಶ್ರೀಮತಿ ಸವಿತಾ ಪಿ.ಆರ್ ರವರು, ನ್ಯಾಯಾಧೀಶರಾಗಿ ಮೈಸೂರು ಸಹಿತ ಅನೇಕ ಕಡೆ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here