ಪಟ್ರುಕೋಡಿ ತರವಾಡು ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೋತ್ಸವ

0

ಉಬರಡ್ಕ ಮಿತ್ತೂರು ಗ್ರಾಮದ ಪಟ್ರುಕೋಡಿ ತರವಾಡು ಮನೆಯ ದೈವಸ್ಥಾನದಲ್ಲಿ ಧರ್ಮ ದೈವ ಶ್ರೀ ರುದ್ರ ಚಾಮುಂಡಿ ಶ್ರೀ ಧೂಮಾವತಿ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಜ.26 ಮತ್ತು 27 ರಂದು ಜರುಗಿತು.


ಜ.26 ರಂದು ಬೆಳಗ್ಗೆ ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ಅಪರಾಹ್ನ ಶ್ರೀ ದೈವಗಳ ಭಂಡಾರ ತೆಗೆದು ಶ್ರೀ ದೈವಕ್ಕೆ ಎಣ್ಣೆ ಬೂಲ್ಯ ಕೊಡುವ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ಗುರು ಕಾರ್ನೋರು, ಜೋಡು ಪಾಷಾಣಮೂರ್ತಿ ದೈವಗಳ ಕೋಲವಾಗಿ ಸತ್ಯದೇವತೆ, ವರ್ಣಾರ ಪಂಜುರ್ಲಿ, ಕೊರತ್ತಿ, ಪಿಲಿಚಾಮುಂಡಿ, ಕುಪ್ಪೆ ಪಂಜುರ್ಲಿ, ರಕ್ತೇಶ್ವರೀ ಮತ್ತು ನಾಗಚಾಮುಂಡಿ ದೈವಗಳ ನೇಮವು ನಡೆಯಿತು.
ಮರುದಿನ ಬೆಳಗ್ಗೆ ಶ್ರೀ ಧರ್ಮ ದೈವ ಶ್ರೀ ರುದ್ರ ಚಾಮುಂಡಿ ಮತ್ತು ಶ್ರೀ ಧೂಮಾವತಿ ದೈವಗಳ ನೇಮೋತ್ಸವವು ನಡೆಯಿತು. ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.


ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಅನ್ನ ಸಂತರ್ಪಣೆಯಾಯಿತು. ಕುಟುಂಬದ ಹಿರಿಯರಾದ ಸೀತಾರಾಮ ಗೌಡ ಪಟ್ರುಕೋಡಿ ಮತ್ತು ತರವಾಡು ದೈವಸ್ಥಾನದ ಆಡಳ್ತೆದಾರ ಯಶವಂತ ಪಟ್ರುಕೋಡಿ ಉಪಸ್ಥಿತರಿದ್ದರು. ಪಟ್ರುಕೋಡಿ ಕುಟುಂಬದ ಹಿರಿಯ ಕಿರಿಯ ಸದಸ್ಯರು ಸರ್ವರನ್ನೂ ಸ್ವಾಗತಿಸಿದರು. ಊರಿನ ಹಾಗೂ ಪರ ಊರಿನ ಭಕ್ತಾದಿಗಳು ಆಗಮಿಸಿ ದ್ದರು.