ಬೊಳುಬೈಲಿನಲ್ಲಿ ಅಪಘಾತ : ಯುವಕನಿಗೆ ಗಂಭೀರ ಗಾಯ

0

ಬೊಳುಬೈಲಿನಲ್ಲಿ ಬುಲ್‌ಟ್ ಬೈಕ್ ಹಾಗೂ ಪ್ಲಾಟೀನ ಬೈಕ್ ನಡುವೆ ಅಪಘಾತ ನಡೆದು ಯುವಕನೊಬ್ಬ ಗಂಭೀರಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ಅಜ್ಜಾವರ ಮುಳ್ಯದ ಪ್ರಜ್ವಲ್ ಎಂಬವರು ಸುಳ್ಯದಿಂದ ಜಾಲ್ಸೂರು ಕಡೆಗೆ ಬುಲೆಟ್ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಅಡ್ಕಾರಿನಿಂದ ಸುಳ್ಯಕ್ಕೆ ಉಬರಡ್ಕ ನೆಯ್ಯೋಣಿಯ ಜಿತಿನ್ ಎಂಬವರು ಚಲಾಯಿಸುತ್ತಿದ್ದ ಪ್ಲಾಟೀನ ಬೈಕ್ ಬೊಳುಬೈಲಿನಲ್ಲಿ ಪರಸ್ಪರ ಢಿಕ್ಕಿಯಾಯಿತು. ಪರಿಣಾಮ ಜಿತಿನ್ ಇದ್ದ ಬೈಕ್ ರಸ್ತೆಗೆ ಬಿದ್ದು, ಜಿತಿನ್ ರಸ್ತೆ ಬದಿಯ ಗುಂಡಿಗೆ ಬಿದ್ದರೆಂದೂ ಅವರ ಗಲ್ಲ, ಕಾಲು, ಕೈ ಗಳಿಗೆ ಗಂಭಿರ ಗಾಯವಾಯಿತು. ಜಿತಿನ್ ಚಲಾಯಿಸುತ್ತಿದ್ದ ಬೈಕ್‌ನ ಹಿಂಬದಿ ಕುಳಿತಿದ್ದ ಉಲ್ಲಾಸ್‌ರಿಗೂ ಹಾಗೂ ಬುಲೆಟ್ ಬೈಕ್ ಸವಾರ ಪ್ರಜ್ವಲ್‌ರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.
ಅವರೆಲ್ಲರೂ ಸುಳ್ಯ ಆಸ್ಪತ್ರೆಗೆ ಬಂದರು. ಗಂಭೀರ ಗಾಯಗೊಂಡ ಜಿತಿನ್‌ರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.