ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದ ಸುವರ್ಣ ಸಂಭ್ರಮ ಭಜನೋತ್ಸವ

0

ನಿರಂತರ ಮೂರು ದಿನಗಳ ಅಖಂಡ ಏಕಾಹ ಭಜನಾ ಮಂಗಲೋತ್ಸವಕ್ಕೆ ದೀಪಪ್ರಜ್ವಲನೆಯ ಮೂಲಕ ಚಾಲನೆ

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರವು ಸ್ಥಾಪನೆಗೊಂಡು ಯಶಸ್ವಿ ಐವತ್ತು ವರ್ಷಗಳನ್ನು ಪೂರೈಸಿದ್ದು, ಸುವರ್ಣ ಸಂಭ್ರಮದ ಭಜನೋತ್ಸವದ ಹಿನ್ನೆಲೆಯಲ್ಲಿ ಮೂರು ದಿನಗಳ ಪರ್ಯಂತ ನಡೆಯಲಿರುವ ನಿರಂತರ 72 ಗಂಟೆಗಳ ಅಖಂಡ ಭಜನಾ ಮಂಗಲೋತ್ಸವಕ್ಕೆ
ಫೆ.1ರಂದು ಪ್ರಾತ:ಕಾಲ ದೀಪಪ್ರಜ್ವಲನೆಯ ಮೂಲಕ ಚಾಲನೆ ನೀಡಲಾಯಿತು.


ಬೆಳಿಗ್ಗೆ ಮಂದಿರದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ ವಾರಂಬಳಿತ್ತಾಯ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಗಳು ನಡೆಯಿತು. ಬಳಿಕ ಸ್ಥಳೀಯ ಭಜಕ ವೃಂದವಾದ ಶ್ರೀ ಆತ್ಮಾರಾಮ ಭಜಕ ವೃಂದದವರಿಂದ ಭಜನೆಯ ಮೂಲಕ ಅಖಂಡ ಏಕಾಹ ಭಜನಾ ಮಂಗಲೋತ್ಸವವು ಪ್ರಾರಂಭಗೊಂಡಿದೆ. ನಿರಂತರ ಮೂರು ದಿನಗಳ ಕಾಲ ನಡೆಯಲಿರುವ ಭಜನೋತ್ಸವದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಭಜನಾ ತಂಡಗಳಿಂದ ಭಜನಾ ಸೇವೆಯು ಜರುಗಲಿದೆ.


ಈ ಸಂದರ್ಭದಲ್ಲಿ ಶ್ರೀ ಆತ್ಮಾರಾಮ ಭಜನಾ ಮಂದಿರದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಕೆ.ಯಂ. ಹರೀಶ ಮೂರ್ಜೆ, ಅಧ್ಯಕ್ಷ ವಸಂತ ಮಳಿ, ಕಾರ್ಯದರ್ಶಿ ಈಶ್ವರ ಕೊಂರ್ಬಡ್ಕ, ಸುವರ್ಣ ಸಂಭ್ರಮ ಭಜನಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷರುಗಳಾದ ವಸಂತ ಗಬ್ಬಲಡ್ಕ ಹಾಗೂ ಆನಂದ ಮಾಸ್ತರ್ ಅಕ್ಕಿಮಲೆ, ಅಧ್ಯಕ್ಷ ಜಗನ್ನಾಥ ಕಾಪಿಲ, ಕಾರ್ಯದರ್ಶಿ ಕುಸುಮಾಧರ ಬೊಮ್ಮೆಟ್ಟಿ, ಖಜಾಂಜಿ ದಾಮೋದರ ಗೌಡ ಕೋಡ್ತಿಲು, ಪ್ರಧಾನ ಸಂಯೋಜಕ ದಾಮೋದರ ಕಣಜಾಲು, ಸಹಸಂಚಾಲಕ ಶ್ರೀಧರ ಕುತ್ಯಾಳ, ಆಡಳಿತ ಮಂಡಳಿಯ ಸದಸ್ಯರುಗಳಾದ ಮನೋಜ್ ಕಲ್ಲೂರಾಯ, ಹೇಮಚಂದ್ರ ಕುತ್ಯಾಳ, ಜಯಪ್ರಸಾದ್ ಕಾರಿಂಜ, ವಿಜಯಕುಮಾರ್ ನರಿಯೂರು, ಅಶೋಕ ಕೊಂರ್ಬಡ್ಕ, ರವಿಚಂದ್ರ ಕನ್ನಡ್ಕಮೂಲೆ, ಮಂದಿರದ ಪರಿಚಾರಕರಾದ ಕೃಷ್ಣ ಬೆಳ್ಚಪ್ಪಾಡ ಕಾರಿಂಜ, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಲೋಹಿತ್ ಕುಮಾರ್ ಕುದ್ಕುಳಿ, ಲಕ್ಷ್ಮೀನಾರಾಯಣ ಕಜೆಗದ್ದೆ, ಚಂದ್ರಶೇಖರ ನೆಡಿಲು, ಹೇಮಂತ್ ಮಠ, ಗೋಪಾಲಕೃಷ್ಣ ಕುತ್ಯಾಳ, ಶೇಷಪ್ಪ ಮಾಸ್ತರ್ ಕುತ್ಯಾಳ, ತಿಲೋತ್ತಮ ಗೌಡ ಕೊಲ್ಲಂತಡ್ಕ, ಚಂದ್ರಶೇಖರ ಬೆಳ್ಚಪ್ಪಾಡ ಕಾರಿಂಜ, ಸುಬ್ರಹ್ಮಣ್ಯ ಮಾಣಿಕೋಡಿ, ಡಾ. ಹರಿಪ್ರಸಾದ್ ಕೆ.ಎಸ್. ಕುದ್ಕುಳಿ, ಬಾಲಚಂದ್ರ ಗೌಡ ಬೊಮ್ಮೆಟ್ಟಿ, ಚಂದ್ರಶೇಖರ ಕನಕಮಜಲು, ಬಾಲಚಂದ್ರ ನೆಡಿಲು, ವಾಸುದೇವ ಪೆರುಂಬಾರು, ಬಾಲಚಂದ್ರ ಬಿ.ಹೆಚ್. ಮಾಣಿಮಜಲು, ಜಗನ್ನಾಥ ಬಿ.ಹೆಚ್. ಮಾಣಿಮಜಲು, ತೀರ್ಥರಾಮ ಕಣಜಾಲು, ಗಣೇಶ್ ಕಜೆಗದ್ದೆ, ಅಶೋಕ ನೆಡಿಲು, ಆನಂದ ಗೌಡ ಪೂಜಾರಿಮನೆ ಸೇರಿದಂತೆ ಭಜನೋತ್ಸವದ ವಿವಿಧ ಉಪಸಮಿತಿಯ ಪದಾಧಿಕಾರಿಗಳು ಸಲಹಾ ಸಮಿತಿಯ ಪದಾಧಿಕಾರಿಗಳು, ಸ್ವಯಂ ಸೇವಕ ಪದಾಧಿಕಾರಿಗಳು, ಮಹೋತ್ಸವ ಸಮಿತಿಯ ಸದಸ್ಯರುಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.