ಫೆ.8-10 : ಕೇರ್ಪಡ ಕೂಡುಕಟ್ಟು ಉಳ್ಳಾಕುಲು ಶಿರಾಡಿ ರಾಜನ್ ದೈವ ಪರಿವಾರ ದೈವಗಳ ನೇಮೋತ್ಸವ

0

ಕೇರ್ಪಡ ಕೂಡುಕಟ್ಟಿನ ಉಳ್ಳಾಕುಲು ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಫೆ.8 ರಿಂದ 10 ರವರೆಗೆ ನಡೆಯಲಿರುವುದು.ಫೆ.8 ರಂದು ಬೊಳ್ಕಜೆ ಸ್ಥಾನ ಚಾವಡಿಯಲ್ಲಿ ಸಂಜೆ 6 ರಿಂದ ಸೋನ ನಡಾವಳಿ, 9 ರಂದು ರಾತ್ರಿ ಸ್ಥಾನ ಚಾವಡಿಯಿಂದ ಭಂಡಾರ ತೆಗೆದು ದೇವರ ಮಜಲಿನಲ್ಲಿ ದೊಂಪದ ಬಲಿ ಉತ್ಸವ ನಡೆದು, ಬೆಳಿಗ್ಗೆ 4 ಕ್ಕೆ ಪ್ರಸಾದ ವಿತರಣೆ ಕೈಕಾಣಿಕೆ ನಡೆದು, ಮಾರಿ ಕಳಕ್ಕೆ ತೆರಳಿ ಬಳಿಕ ದೇವರಮಜಲಿನಲ್ಲಿ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ.