ಬೊಳುಬೈಲು ಶಾಲೆಗೆ ವಿವಿಧ ಕೊಡುಗೆಗಳ ಹಸ್ತಾಂತರ

0

ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆ ಬೊಳುಬೈಲುಗೆ ರೋಟರಿ ಕ್ಲಬ್ ಸುಳ್ಯ, ಲಯನ್ಸ್ ಕ್ಲಬ್ ಪುತ್ತೂರು-ಕಾವು ಮತ್ತು ಫೆಡರಲ್ ಬ್ಯಾಂಕ್ ಸುಳ್ಯ ಶಾಖೆಯವರಿಂದ ಕೊಡುಗೆಗಳ ಹಸ್ತಾಂತರ ಫೆ.1 ರಂದು ನಡೆಯಿತು.


ನಲಿಕಲಿ ವಿದ್ಯಾರ್ಥಿಗಳಿಗೆ 20 ಚಯರ್ ಮತ್ತು ಶಿಕ್ಷಕರಿಗೆ 2 ಚಯರ್‌ಗಳನ್ನು ಕೊಡುಗೆಯಾಗಿ ರೋಟರಿ ಕ್ಲಬ್ ಸುಳ್ಯದ ವತಿಯಿಂದ ನೀಡಿದ್ದು, ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹಸ್ತಾಂತರಿಸಿದರು. ವೇದಿಕೆಯಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ಕಾರ್ಯದರ್ಶಿ ಮಧುರಾ ಎಂ.ಆರ್, ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೆಕಲ್ಲು, ಝೋನಲ್ ಲೆಪ್ಟಿನೆಂಟ್ ಪ್ರೀತಂ.ಡಿ.ಕೆ, ನಿಯೋಜಿತ ಅಧ್ಯಕ್ಷ ಆನಂದ ಖಂಡಿಗ, ಹಿರಿಯ ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.


ಶಾಲೆಗೆ ಕಂಪ್ಯೂಟರ್ (ಗಣಕಯಂತ್ರ) ಕೊಡುಗೆಯಾಗಿ ಲಯನ್ಸ್ ಕ್ಲಬ್ ಪುತ್ತೂರು-ಕಾವು ಇದರ ವತಿಯಿಂದ ನೀಡಿದ್ದು, ಲಯನ್ಸ್ ಕ್ಲಬ್ ರೀಜನ್ ೭ ಝೋನ್ ೨ರ ವಲಯ ಅಧ್ಯಕ್ಷ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆಗಿರುವ ರಮೇಶ್ ರೈ ಸಾಂತ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಪವನರಾಮ, ಕಾರ್ಯದರ್ಶಿ ಜಗನ್ನಾಥ ರೈ ಗುತ್ತು, ಮೆಂಬರ್‌ಶಿಪ್ ಕಮಿಟಿಯ ಚೇರ್‌ಪರ್ಸನ್ ದೇವಣ್ಣ ರೈ, ಸರ್ವಿಸ್ ಕಮಿಟಿಯ ಅಮ್ಮು ರೈ ಉಪಸ್ಥಿತರಿದ್ದು ಕಂಪ್ಯೂಟರ್ ಹಸ್ತಾಂತರಿಸಿದರು.
ಪ್ರಿಂಟರ್‌ನ್ನು ಕೊಡುಗೆಯಾಗಿ ಫೆಡರಲ್ ಬ್ಯಾಂಕ್ ಸುಳ್ಯ ಶಾಖೆ ನೀಡಿದ್ದು, ಸುಳ್ಯ ಶಾಖೆಯ ಪ್ರಬಂಧಕರು ನಿಧಿನ್ ಗಂಗಾಧರನ್, ಸಿಬ್ಬಂದಿಗಳಾದ ಮಂಜೇಶ್.ಜಿ, ಲೋಕೇಶ್.ಕೆ.ಎಸ್ ಮತ್ತು ಸ್ಪಂದನ್ ಶೇಷಾದ್ರಿ ಉಪಸ್ಥಿತರಿದ್ದು ಪ್ರಿಂಟರ್ ಹಸ್ತಾಂತರಿಸಿದರು.
ಈ ಸಂದರ್ಭ ನಿವೃತ್ತ ಶಿಕ್ಷಕ ಲೋಕನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಲ್ಸೂರು ವಲಯ ಬೊಳುಬೈಲು ಒಕ್ಕೂಟದ ಅಧ್ಯಕ್ಷ ಪದ್ಮನಾಭ ನೆಕ್ರಾಜೆ, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯೆ, ಶಾಲಾಭಿಮಾನಿಗಳ ಸಂಘದ ಅಧ್ಯಕ್ಷೆ ಶ್ರೀಮತಿ ಗೀತಾ ಗೋಪಿನಾಥ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಬೈತಡ್ಕ, ಶಾಲಾ ಮುಖ್ಯ ಗುರು ಶ್ರೀಮತಿ ರಾಧಮ್ಮ.ಕೆ, ನವಚೇತನ ಯುವಕ ಮಂಡಲ ಬೊಳುಬೈಲು ಇದರ ಅಧ್ಯಕ್ಷ ಶಶಿಪ್ರಸಾದ್ ಕಾಟೂರು, ಕನಕಮಜಲು ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ಸಹಶಿಕ್ಷಕಿ ಶ್ರೀಮತಿ ವಾಣಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಬೇಬಿ ಕುಮಾರಿ, ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ತಿಲಕ ಮತ್ತು ಹಿರಿಯ ವಿದ್ಯಾರ್ಥಿಗಳು, ಪೋಷಕರು ಹಾಗೂ ನವಚೇತನ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.