ಸುಳ್ಯ ಯೂನಿಯನ್ ಬ್ಯಾಂಕ್ ಕ್ಲರ್ಕ್ ಚಾರ್ಲ್ಸ್ ಹೆರಾಲ್ಡ್ ಡಿಸೋಜಾ ನಿವೃತ್ತಿ

0


ಸುಳ್ಯದ ಮುಖ್ಯ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಚಾರ್ಲ್ಸ್ ಹೆರಾಲ್ಡ್ ಡಿಸೋಜಾರವರು ಜ. ೩೧ರಂದು ನಿವೃತ್ತರಾಗಿದ್ದಾರೆ. ೨೦೦೭ರಲ್ಲಿ ಮಂಗಳೂರಿನ ಕಾರ್ಪೋರೇಷನ್ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಆರ್ಮ್‌ಡ್ ಗಾರ್ಡ್ ಆಗಿ ಸೇವೆ ಆರಂಭಿಸಿದ ಚಾರ್ಲ್ಸ್‌ರವರು ೨೦೧೨ರಲ್ಲಿ ಬ್ಯಾಂಕ್ ಪರೀಕ್ಷೆ ಬರೆದು ಕ್ಲರಿಕಲ್ ಹುದ್ದೆಗೆ ಸೇರ್ಪಡೆಯಾದರು. ಮಂಗಳೂರು ಶಾಖೆಯಿಂದ ಬೆಳ್ಳಾರೆ ಶಾಖೆಗೆ ವರ್ಗಾವಣೆಗೊಂಡು ಅಲ್ಲಿ ೫ ವರ್ಷ ಸೇವೆಯಲ್ಲಿದ್ದರು. ೨೦೧೭ರಿಂದ ಸುಳ್ಯ ಯೂನಿಯನ್ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಜ. ೩೧ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.
ಬೀರಮಂಗಲ ನಿವಾಸಿಯಾಗಿರುವ ಇವರು ಪತ್ನಿ ಎಮಿಲಿಯಾ ಡಿಸೋಜಾ ಗೃಹಿಣಿಯಾಗಿದ್ದಾರೆ. ಪುತ್ರ ವೀವನ್ ಹೆರಾಲ್ಡ್ ಡಿಸೋಜಾ ಅಮೇರಿಕಾದಲ್ಲಿ ಮರ್ಚೆಂಟ್ ನೇವಿಯಲ್ಲಿ ಸೇವೆಯಲ್ಲಿದ್ದಾರೆ. ಪುತ್ರಿ ವಿನಿತಾ ಹೆರಾಲ್ಡ್ ವಿಜ್ಞಾನಿಯಾಗಿ ಸಂಸಾರ ಸಮೇತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.