ವಿಧಾನ ಸಭಾ ಚುನಾವಣೆ : ಹಿರಿಯರ ನಿರ್ಧಾರಕ್ಕೆ ಬದ್ಧ

0


ರಾಜಕೀಯ ಇಚ್ಛಾಸಕ್ತಿ ನಮ್ಮ ಕಾರ್ಯಕರ್ತರಿಗಿಲ್ಲ : ವಿ.ಹಿಂ.ಪ. – ಭಜರಂಗದಳ

”ವಿಧಾನ ಸಭಾ ಚುನಾವಣೆಗೆ ಯಾರು ಅಭ್ಯರ್ಥಿಯಾಗಬೇಕೆನ್ನುವುದು ನಮ್ಮ ಸಂಘಟನೆಗಳ ಹಿರಿಯರು ನಿರ್ಧಾರ ಮಾಡುತ್ತಾರೆ. ಹಿರಿಯರ ನಿರ್ಧಾರಕ್ಕೆ ಬದ್ಧರಾಗಿ ನಾವು ಕೆಲಸ ಮಾಡುತ್ತೇವೆ” ಎಂದು ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಸ್ಪಷ್ಟ ಪಡಿಸಿದೆ.
ಫೆ.೪ರಂದು ಸುಳ್ಯದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು, ವಿಧಾನ ಸಭಾ ಚುನಾವಣೆಯಲ್ಲಿ ಭಜರಂಗದಳದ ಪ್ರಮುಖರು ಸ್ಪರ್ಧೆ ನಡೆಸುತ್ತಾರ ಎಂದು ಕೇಳಿದಾಗ, “ರಾಜಕೀಯ ಇಚ್ಛಾಸಕ್ತಿ ನಮ್ಮ ಕಾರ್ಯಕರ್ತರಿಗಿಲ್ಲ. ರಾಜಕೀಯ ಕಾರ್ಯದಲ್ಲಿ ನಾವು ಹೋಗಬಾರದೆಂಬ ಸೂಚನೆಯೂ ನಮಗೆ ಇದೆ. ನಮ್ಮ ಸಮಾಜ ಮತ್ತು ಧರ್ಮದ ರಕ್ಷಣೆಗಾಗಿ ಸಂಘಟನೆ ಕೆಲಸ ಮಾಡುತ್ತಿದೆ. ಚುನಾವಣಾ ವಿಚಾರದಲ್ಲಿ ಹಿರಿಯರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಸಂಚಾಲಕ ಸೋಮಶೇಖರ ಪೈಕ, ಸಂಘಟನೆಯ ಕಾನೂನು ಸಲಹೆಗಾರ ಸಂದೀಪ್ ವಳಲಂಬೆ ಹಾಗೂ ಭಜರಂಗದಳ ತಾಲೂಕು ಸಂಚಾಲಕ ಹರಿಪ್ರಸಾದ್ ಎಲಿಮಲೆ ಹೇಳಿದರು.