ಅಲೆಕ್ಕಾಡಿ ಶಾಲೆಯಲ್ಲಿ ಪೋಷಕರ ಸಭೆ ಮತ್ತು ಮೆಟ್ರಿಕ್ ಮೇಳ

0


ಅಲೆಕ್ಕಾಡಿ ಸ.ಉ ಹಿ.ಪ್ರಾ ಶಾಲೆಯಲ್ಲಿ ಪೋಷಕರ ಸಭೆ ಮತ್ತು ಮೆಟ್ರಿಕ್ ಮೇಳ ಫೆ. 4 ರಂದು ಏರ್ಪಡಿಸಲಾಯಿತು. ಮೇಳದ ಉದ್ಘಾಟನೆಯನ್ನು ಮುರುಳ್ಯ ಪಂಚಾಯತ್ ಸದಸ್ಯರಾದ ಶ್ರೀ ಕರುಣಾಕರ ಹುದೇರಿ ನೆರವೇರಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ, ಲಾಭ-ನಷ್ಟ ಗಣಿತದ ಲೆಕ್ಕಾಚಾರ, ಹಣದ ಮೌಲ್ಯದ ಬಗ್ಗೆ ಅರಿವು ಮೂಡಿಸಲು ’ಕೊಡುವ ಮತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಗ್ರಾಹಕರನ್ನು ಆಕರ್ಷಿಸುವ ಕೌಶಲವನ್ನು ಮಕ್ಕಳು ಈ ಒಂದು ಮೆಟ್ರಿಕ್ ಮೇಳದಲ್ಲಿ ತಿಳಿದು ಕೊಳ್ಳಲು ಪ್ರೇರಣೆಯಾಯಿತು.

ನೂರರಷ್ಟು ಮಕ್ಕಳು ಈ ಮೇಳದಲ್ಲಿ ತಾವು ಮನೆಯಲ್ಲಿ ಬೆಳೆಸಿದ ಹಣ್ಣು ತರಕಾರಿ ಹೂಗಿಡ ಮುದ್ದಿನ ಗಿಡ ಸೊಪ್ಪು, ತಿಂಡಿಗಳು ತಂಪು ಪಾನೀಯಗಳು ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಿ ಸುಮಾರು 10 ಸಾವಿರದಷ್ಟು ಹಣ ಸಂಪಾದನೆ ಮಾಡಿದರು. ಈ ಎಲ್ಲಾ ಹಣವನ್ನು ಮಕ್ಕಳು ತಮ್ಮ ತಮ್ಮ ಖಾತೆಗಳಿಗೆ ಜಮೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಯಿಲಪ್ಪ ಪಿಲಂ ಕುಜೆ , ನಿವೃತ್ತ ಶಿಕ್ಷಕಿ ಶ್ರೀಮತಿ ಲೀಲಾವತಿ, ಅನೂಪ್ ಬಿಳಿಮಲೆ ಉಪನ್ಯಾಸಕ ಐತಪ್ಪ, ಶಿಕ್ಷಕ ಬಾಲಕೃಷ್ಣ ಕೆ., ಸುದಿನ್ ರೈ, ದ್ರುವಕುಮಾರ್ ಕೇರ್ಪಡ ಅನೇಕ ಗಣ್ಯರು ’ಪೋಷಕರು, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿ ಮಕ್ಕಳ ವ್ಯಾಪಾರದಲ್ಲಿ ಗ್ರಾಹಕರಾಗಿ ಭಾಗವಹಿಸಿ ಶುಭಹಾರೈಸಿ ಪ್ರೋತ್ರಾಹಿಸಿದರು. ಎಸ್. ಡಿ. ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಮಧು ಪಿ.ಆರ್ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತನಾಡಿ ಶುಭ ಹಾರೈಸಿದರು. ಎಲ್ಲಾ ಎಸ್‌ಡಿಎಂಸಿ ಅ ಸದಸ್ಯರು ’ಶಿಕ್ಷಕ ವೃಂದ ಮತ್ತು ಪೋಷಕರು ಸಹಕರಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಂದಿಸಿದರು.