ಸುಳ್ಯ ಇನ್ನರ್‌ವಿಲ್ ಕ್ಲಬ್‌ಗೆ ಜಿಲ್ಲಾಧ್ಯಕ್ಷರ ಭೇಟಿ : ಪೆರಾಜೆ ದೇವಸ್ಥಾನಕ್ಕೆ ನೀರಿನ ಘಟಕ ಹಸ್ತಾಂತರ

0


ಸುಳ್ಯ ಇನ್ನರ್ವಿಲ್ ಕ್ಲಬ್ ಗೆ ಜಿಲ್ಲಾಧ್ಯಕ್ಷರಾದ ಕವಿತ ನಿಯತ್ ರವರು ಫೆ.3 ರಂದು ಭೇಟಿ ನೀಡಿದರು.
ಸುಳ್ಯ ಕ್ಬ್‌ಗೆ ಭೇಟಿ ನೀಡಿದ ಅವರು ಪೆರಾಜೆ ಶ್ರೀ ಶಾಸ್ತಾವೇಶ್ವರ ದೇವಸ್ಥಾನಕ್ಕೆ ಇನ್ನರ್ವೀಲ್ ಕ್ಲಬ್ ವತಿಯಿಂದ ನೀಡಲಾಗಿರುವ ನೀರಿನ ಶೀತಲೀಕರಣ ಘಟಕವನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಪೆರಾಜೆಯಿಂದ ಹಿಂತಿರುಗಿ ಸುಳ್ಯದ ಉಡುಪಿ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಭೆಯ ಅಧ್ಯಕ್ಷತೆಯನ್ನು ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಯನ ಹರಿಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷೆ ಕವಿತ ನಿಯತ್, ಸುಳ್ಯ ಇನ್ನರ್ ವೀಲ್ ಕಾರ್ಯದರ್ಶಿ ಸವಿತಾ ನಾರ್ಕೋಡು, ಉಪಾಧ್ಯಕ್ಷೆ ಯೋಗಿತ ಗೋಪಿನಾಥ್, ಸವಿತಾ ಸಿ ಕೆ, ಚಿಂತನ ಮಾಣಿಬೆಟ್ಟು , ಮಮತಾ ನಾರ್ಕೋಡ , ಲತಾ ರೈ, ಕೃಪಾ ಚಂದ್ರಶೇಖರ್, ಪೂಜಾ ಸಂತೋಷ್ ಉಪಸ್ಥಿತರಿದ್ದರು.


ಕ್ಲಬ್ ಸರ್ವಿಸ್ ಅಡಿಯಲ್ಲಿ ನೀರಿನ ಘಟಕದ ಸಾಂಕೇತಿಕ ಹಸ್ತಾಂತರ ಹಾಗೂ ಕ್ಯಾನ್ಸರ್ ನಿಂದ ಚಿಕಿತ್ಸೆ ಪಡೆಯುತ್ತಿರುವ ತಶ್ವೀನ್ ಎಂಬ ಬಾಲಕನಿಗೆ ಸಹಾಯಧನ ನೀಡಲಾಯಿತು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ಪೇರಲ್ ಕ್ಲಬ್ ನ ಬುಲೆಟಿನ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ. ಎಲ್ಲಾ ಇನ್ನರ್ವೀರ್ ಸದಸ್ಯರು ರೋಟರಿ ಸದಸ್ಯರು, ರೋಟರಿ ಸಿಟಿ ಅಧ್ಯಕ್ಷರಾದ ಮುರಳಿಧರ ರೈ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು. ಡಾ. ಹರ್ಷಿತಾ ಪುರುಷೋತ್ತಮ್, ಶ್ರೀಮತಿ ಜಯಮಣಿ ಮಾಧವ, ಶ್ರೀಮತಿ ಮಮತಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here