ಹರಿಹರ ಪಲ್ಲತ್ತಡ್ಕ:ಎಲ್ಲಪ್ಪಡ್ಕದ ಶ್ರೀ ಗುಳಿಗರಾಜ ದೈವದ ನೇಮೋತ್ಸವ

0

ಹರಿಹರ ಪಲ್ಲತ್ತಡ್ಕ ಶ್ರೀ ಗುಳಿಗರಾಜ ದೈವಸ್ಥಾನ ಎಲ್ಲಪ್ಪಡ್ಕ ಇದರ ವಾರ್ಷಿಕ ನೇಮೋತ್ಸವವು ಜ. 4ರಂದು ನಡೆಯಿತು.
ಬೆಳಿಗ್ಗೆ ಗಣಪತಿ ಹವನ ಮಧ್ಯಾಹ್ನ ಮಹಾಪೂಜೆ ಹಾಗೂ ರಾತ್ರಿ ದುರ್ಗಾ ಪೂಜೆ ನಡೆದು ನಂತರ ಗುಳಿಗರಾಜ ದೈವದ ನೇಮಹೋತ್ಸವ ನಡೆಯಿತು.
ಶ್ರೀ ಗುಳಿಗರಾಜ ಭಕ್ತವೃಂದದ ವತಿಯಿಂದ ರಾತ್ರಿ ಕಾಂತಾರ ಚಲನಚಿತ್ರ ಎಲ್ ಇ ಡಿ ಪರದೆಯಲ್ಲಿ ಪ್ರದರ್ಶನ ನಡೆಯಿತು.


ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು. ವರದಿ: ಕುಶಾಲಪ್ಪ ಕಾಂತುಕುಮೇರಿ