ಕುಂಚಡ್ಕ ಶ್ರೀ ಮಹಾಲಕ್ಷ್ಮಿ ಐನ್ ಮನೆಯಲ್ಲಿ ದೈವ ದೇವರ ಪ್ರತಿಷ್ಠಾ ಮಹೋತ್ಸವ – ಗೌರವ ಸಮರ್ಪಣಾ ಸಮಾರಂಭ

0

ಕುಂಚಡ್ಕ ತರವಾಡು ಮನೆಯ ಶ್ರೀ ಮಹಾಲಕ್ಷ್ಮಿ ದೇವರ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವವು ಫೆ.10 ರಂದು ನಡೆಯಿತು.
ಬ್ರಹ್ಮಶ್ರೀ ವೇದಮೂರ್ತಿ ಆರೋತ್ ಕೆ.ಯು.ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಬೆಳಗ್ಗೆ 9.24- 10.31 ರ ಶುಭ ಮುಹೂರ್ತದಲ್ಲಿ ಶ್ರೀ ಮಹಾಲಕ್ಷ್ಮೀ ದೇವರ ಪೀಠ ಪ್ರತಿಷ್ಠೆ, ಕಾಂಚಮ್ಮನ ಕಟ್ಟೆ ಪ್ರತಿಷ್ಠೆ, ಜೀವಕಲಶಾಭಿಷೇಕ, ದೈವಗಳಿಗೆ ತಂಬಿಲ‌ ಸೇವೆಯಾಗಿ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಬಳಿಕ ನಿತ್ಯ ನೈಮಿತ್ಯಾದಿಗಳ ನಿರ್ಣಯ ಮಾಡಲಾಯಿತು.


ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಭವನದ ಎದುರಿನ ಶಾಶ್ವತ ಚಪ್ಪರದ ಮತ್ತು ಇಂಟರ್ ಲಾಕ್ ಅಳವಡಿಕೆ ಗೆ ದಾನಿಗಳಾಗಿ ಸಹಕರಿಸಿದ ಆಡಳಿತ ಕಮಿಟಿ ಅಧ್ಯಕ್ಷ ಪೂವಯ್ಯ ಗೌಡ ಕುಂಚಡ್ಕ ಮತ್ತು ಶ್ರೀಮತಿ ಭಾಗೀರಥಿ ಪೂವಯ್ಯ ಗೌಡ ದಂಪತಿ ಯವರನ್ನು ಹಾಗೂ ವೈದಿಕ ಕಾರ್ಯಕ್ರಮಗಳಿಗೆ ಆರಂಭದಿಂದ ಮಾರ್ಗದರ್ಶನ ನೀಡಿದ ಕೃಪಾಶಂಕರ ತುದಿಯಡ್ಕ ರವರನ್ನು ಕುಂಚಡ್ಕ ಕುಟುಂಬಸ್ಥರ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕುಂಚಡ್ಕ ಕುಟುಂಬದ ಯಜಮಾನ ವೆಂಕಪ್ಪ ಗೌಡ ಕುಂಚಡ್ಕ, ಆಲೆಟ್ಟಿ ಸದಾಶಿವ ದೇವಸ್ಥಾನದ ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯ.ಸ.ಸದಸ್ಯ ಸುಧಾಮ ಆಲೆಟ್ಟಿ, ಬಡ್ಡಡ್ಕ ರಾಮಕೃಷ್ಣ ಅ.ಹಿ.ಪ್ರಾ.ಶಾಲೆಯ ಸಂಚಾಲಕ ಡಾ.ಜ್ಞಾನೇಶ್ ಎನ್.ಎ, ಬಡ್ಡಡ್ಕ ಅಯ್ಯಪ್ಪ ಭ.ಮಂ.ಅಧ್ಯಕ್ಷ ಬಾಲಚಂದ್ರ ಪಿ.ಕೆ, ಜಯಪ್ರಕಾಶ್ ಕುಂಚಡ್ಕ, ಕೊರಗಪ್ಪ ಮಾಸ್ತರ್ ಕುಂಚಡ್ಕ ಉಪಸ್ಥಿತರಿದ್ದರು. ಜಯಪ್ರಕಾಶ್ ಕುಂಚಡ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊರಗಪ್ಪ ಮಾಸ್ತರ್ ವಂದಿಸಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕುಂಚಡ್ಕ ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆಯಾಯಿತು.