ರಾಜ್ಯ ವಿಧಾನಸಭಾ ಚುನಾವಣೆ ಹವಾ

0


ಪುಣ್ಯ ಕ್ಷೇತ್ರಗಳಿಗೆ ಬರುತ್ತಿದೆ ಸಾಲು ಸಾಲು ತೀರ್ಥಯಾತ್ರೆ ಬಸ್


ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ದಂಡು; ನಾಯಕರೇ ಸ್ಪಾನ್ಸರ್‍ಸ್


ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ರಾಜಕೀಯ ಪಕ್ಷಗಳ ನಾಯಕರು ತಮ್ಮ ಕ್ಷೇತ್ರದ ಬೆಂಬಲಿಗರಿಗೆ ಪುಣ್ಯ ಕ್ಷೇತ್ರದ ತೀರ್ಥಯಾತ್ರೆಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯಗಳಲ್ಲಿ ದಿನಂಪ್ರತಿ ಉತ್ತರ ಕರ್ನಾಟಕ ಭಾಗದ ಸಾಲು ಸಾಲು ಬಸ್ಸುಗಳು ಕಂಡು ಬರುತ್ತಿವೆ.


ಕಳೆದ ಕೆಲವು ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆ ಭಾಗದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಇವರೆಲ್ಲಾ ಬರುತ್ತಿದ್ದು, ಬಸ್‌ಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರ ಫೊಟೋ ಚಿಹ್ನೆಗಳು ರಾರಾಜಿಸುತ್ತಿವೆ. ಧ್ವಜಗಳೂ ಕಂಡುಬರುತ್ತಿವೆ. ಈ ಕುರಿತು ಮಾಹಿತಿ ಸಂಗ್ರಹಿಸಿದಾಗ, ಆ ಭಾಗದ ರಾಜಕೀಯ ನಾಯಕರೇ ಸ್ಪಾನ್ಸರ್ ಮಾಡಿ ಇವರನ್ನು ಉಚಿತವಾಗಿ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂಬ ವಿವರ ತಿಳಿದು ಬಂತು.


ಜೆಡಿಎಸ್ ಪಕ್ಷದ ನಾಯಕರ ಫೊಟೋಗಳಿರುವ ಬಸ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ಕಾಂಗ್ರೆಸ್ ಪಕ್ಷದ ನಾಯಕರ ಫೊಟೋಗಳಿರುವ ಬಸ್‌ಗಳೂ ಬರುತ್ತಿವೆ. ಬಿಜೆಪಿ ಪಕ್ಷದ ನಾಯಕರ ಫೊಟೋಗಳಿರುವ ಬಸ್‌ಗಳು ಕೂಡಾ ವಿರಳವಾಗಿ ಕಾಣಸಿಗುತ್ತಿದೆ. ಕಳೆದ ಆದಿತ್ಯವಾರ ಒಂದೇ ದಿನ 60 ಕ್ಕೂ ಹೆಚ್ಚು ಬಸ್‌ಗಳು ಬಂದಿತ್ತು ಎಂದು ಸುಬ್ರಹ್ಮಣ್ಯದ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.