ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಜಾತ್ರೋತ್ಸವ

0

ಶ್ರೀ ದೇವರ ವೈಭವದ ಪೇಟೆ ಸವಾರಿ, ಸಿಡಿಮದ್ದು ಪ್ರದರ್ಶನ

ಫೆ.17 ರಂದು ದರ್ಶನ ಬಲಿ,ಬಟ್ಟಲು ಕಾಣಿಕೆ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13 ರಂದು ಪ್ರಾರಂಭಗೊಂಡಿದ್ದು ಫೆ 17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಫೆ.15 ರಂದು ಬೆಳಿಗ್ಗೆ ಗಣಪತಿ ಹವನ,ಉಷಾಃಪೂಜೆ ನಡೆಯಿತು.
ನಂತರ ಶಿವೇಲಿ,ನವಕ ಕಲಶಾಭಿಷೇಕ ಮಧ್ಯಾಹ್ನ 12.00 ಕ್ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಿತು,ರಾತ್ರಿ ಗಂಟೆ 7.00 ಕ್ಕೆ ರಾತ್ರಿ ಪೂಜೆ,7.30 ಕ್ಕೆ ನೃತ್ಯ ಬಲಿ ನಡೆಯಿತು.


ಫೆ.16 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಉಷಾಃಪೂಜೆ,ಶಿವೇಲಿ,ನವಕ ಕಲಶಾಭಿಷೇಕ
ಮಧ್ಯಾಹ್ನ 12.00 ಕ್ಕೆ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಿತು.
ಸಂಜೆ ಶ್ರೀ ಭೂತಬಲಿ,ಸೇವೆಸುತ್ತು, ಪೇಟೆ ಸವಾರಿ ನಡೆಯಿತು.
ಅಲ್ಲಲ್ಲಿ ಪೇಟೆಯ ಕಟ್ಟೆಯಲ್ಲಿ ಶ್ರೀ ದೇವರಿಗೆ ಪೂಜೆ ನಡೆಯಿತು.
ಕಟ್ಟೆಗಳನ್ನು ಸುಂದರವಾಗಿ ಹೂ,ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.


ಬಳಿಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ
ರಾತ್ರಿ 9.00 ಕ್ಕೆ ರಾತ್ರಿ ಪೂಜೆ,ರಾತ್ರಿ ಗಂಟೆ 10.00 ಕ್ಕೆ ಶಯನ,ಕವಾಟಬಂಧನ ನಡೆಯಲಿದೆ.
ಫೆ.17 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಕವಾಟೋದ್ಘಾಟನೆ, ತೈಲಾಭ್ಯಂಜನ,ಉಷಾಃಪೂಜೆ,ಆರಾಟುಬಲಿ,ನಂತರ ಅವಭೃತ ಸ್ನಾನ ,ದರ್ಶನ ಬಲಿ ನಡೆಯಲಿದೆ.
ಮಧ್ಯಾಹ್ನ 11.
30 ಕ್ಕೆ ರಾಜಾಂಗಣ ಪ್ರಸಾದ,ಬಟ್ಟಲುಕಾಣಿಕೆ,ಧ್ವಜ ಅವರೋಹಣ ,ಸಂಪ್ರೋಕ್ಷಣೆ,ಮಹಾಪೂಜೆ,ಮಂತ್ರಾಕ್ಷತೆ,ಅನ್ನಪ್ರಸಾದ ನಡೆಯಲಿದೆ.
ರಾತ್ರಿ 7.30 ಕ್ಕೆ ಅಗ್ನಿಗುಳಿಗ ದೈವದ ಭಂಡಾರ ತೆಗೆಯುವುದು,ಭೂತಕೋಲ,ಬಟ್ಟಲುಕಾಣಿಕೆ ನಡೆಯಲಿದೆ.
ನಡೆಯಲಿದೆ ಎಂದು ಆಡಳಿತಾಧಿಕಾರಿ ತಿಳಿಸಿದ್ದಾರೆ.