ಸುಳ್ಯ: ಡಿ ಬಾಸ್ ದರ್ಶನ್ ತೂಗುದೀಪ ಹುಟ್ಟುಹಬ್ಬದ ಸಂಭ್ರಮಾಚರಣೆ

0

ಫೇ.೧೬ ಕನ್ನಡ ಚಿತ್ರರಂಗದ ಡಿ ಬಾಸ್ ದರ್ಶನ್ ತೂಗುದೀಪ ಅವರ ಜನುಮ ದಿನ. ಸುಳ್ಯದ ಅಭಿಮಾನಿ ಬಳಗವೊಂದು ತಾವು ಕಲಿತ ಕುಕ್ಕುಜಡ್ಕ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆಗೆ ಸಿಹಿತಿಂಡಿ, ಪೆನ್ಸಿಲ್, ಪುಸ್ತಕ ನೀಡುವ ಮೂಲಕ ಹಾಗೂ ಪಂಚಾಯತ್ ನಿಬ್ಬಂದಿಗಳಿಗೆ ಸಿಹಿಯನ್ನು ಹಂಚುವ ಮೂಲಕ ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.


ಡಿ ಬಾಸ್ ಗಜಪಡೆ ಸಂಕೇಶ ಎಂಬ ಅಭಿಮಾನಿ ಬಳಗದ ಮೂಲಕ ಜಗ್ಗೇಶ್ ಸಂಕೇಶ, ಕೀರ್ತನ್ ಸಂಕೇಶ, ಇಂದ್ರೇಶ್ ಸಂಕೇಶ, ಜಾಹ್ನವಿ ಸಂಕೇಶ, ಮೋಕ್ಷಿತ್ ನೆಟ್ಟಾರು, ನವನೀತ್ ನೆಟ್ಟಾರು ಎಂಬ ಯುವಕರು ತಮ್ಮ ನೆಚ್ಚಿನ ಸಿನಿ ನಾಯಕನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ, ವಾರದ ಮುಂಚೆಯೇ ಸುಳ್ಯದ ಬಸ್ ನಿಲ್ದಾಣ ದ ಬಳಿ ಬ್ಯಾನರ್ ಹಾಕಿದ್ದರು.