ಪಂಜ ಗ್ರಾಮ ಪಂಚಾಯತ್ 2022-23 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ

0

ಪಂಜ ಗ್ರಾಮ ಪಂಚಾಯತ್ 2022-23 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಫೆ.17 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸೈಟ್ ನಿರ್ಮಾಣಕ್ಕೆ ಲೀಗಲ್ ಆಗಿ ಪಂಚಾಯತ್ ನಿಂದ ಅನುಮತಿ ನೀಡ ಬೇಕು,ಚಿಂಗಾಣಿಗುಡ್ಡೆ ನೀರಿನ ಪೈಪ್ ಲೈನ್ ಯೋಜನೆ ಕುರಿತು,ಕೂತ್ಕುಂಜ ಮತ್ತು ಪಂಜ ಪ್ರಾಥಮಿಕ ಶಾಲೆ ಕಟ್ಟಡ ಅಭಿವೃದ್ಧಿ ಪಡಿಸುವ ಕುರಿತು,ನವ ಸಾಕ್ಷರರ ಅಭಿವೃದ್ಧಿ ಪುನರ್ ಸ್ಥಾಪನೆ ಕುರಿತು , ಪಂಜ ಪಶು ಸಂಗೋಪನಾ ಇಲಾಖೆಗೆ ಖಾಯಂ ವೈದ್ಯರು ಬೇಕು, ಪ್ಲಾಸ್ಟಿಕ್ ಮುಕ್ತ ಗ್ರಾಮ ಆಗ ಬೇಕು, ವಿದ್ಯುತ್ ಪರಿವರ್ತಕ, ಲೈನ್ ದುರಸ್ಥಿ, ಕೃಷಿ ಇಲಾಖೆಯಲ್ಲಿ ನಗದು ವಿತರಿಸ ಬೇಕು , ಶಾಲೆಗಳಲ್ಲಿ ಶಿಕ್ಷಕರ ಕೊರತೆ,ರಸ್ತೆ ದುರಸ್ತಿ ಮೊದಲಾದ ಗ್ರಾಮ ಅಭಿವೃದ್ಧಿ ವಿಚಾರಗಳ ಕುರಿತು ಬೇಡಿಕೆ ಮತ್ತು ಚರ್ಚೆಗಳು ನಡೆಯಿತು.


ಸುಳ್ಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ನೋಡೆಲ್ ಅಧಿಕಾರಿಯಾಗಿ ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಸಭಾಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಸದಸ್ಯರಾದ ಶ್ರೀಮತಿ ವೀಣಾ,ನಾರಾಯಣ ಕೃಷ್ಣನಗರ, ಲಕ್ಷ್ಮಣ ಗೌಡ ಬೊಳ್ಳಾಜೆ, ಶ್ರೀಮತಿ ದಿವ್ಯಾ ಪುಂಡಿಮನೆ , ಜಗದೀಶ್ ಪುರಿಯ, ಶ್ರೀಮತಿ ಪ್ರಮೀಳ ಸಂಪ, ಶ್ರೀಮತಿ ಮಲ್ಲಿಕಾ ಅಳ್ಪೆ,ಚಂದ್ರಶೇಖರ ದೇರಾಜೆ, ಶ್ರೀಮತಿ ವಿಜಯಲಕ್ಷ್ಮಿ ಜಳಕದಹೊಳೆ, ಶರತ್ ಕುದ್ವ, ಲಿಖಿತ್ ಪಲ್ಲೋಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪಂಜ ಕಂದಾಯ ಇಲಾಖೆಯಿಂದ ವರ್ಗಾವಣೆಗೊಂಡ ಶಂಕರ್ ಎಂ ಎಲ್ ರವರನ್ನು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.‌ಪಂಜ ಪಂಚಾಯತ್ ನಿಂದ ಕಬಡ್ಡಿ ತಂಡದಿಂದ ಪ್ರತಿನಿಧಿಸಿ ತಾಲೂಕಿನಲ್ಲಿ ದ್ವಿತೀಯ ಸ್ಥಾನಗಳಿಸಿದ ಸಂಜೀವಿನಿ ಒಕ್ಕೂಟದ ಸೌಭಾಗ್ಯ ತಂಡದ ಸದಸ್ಯನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಶ್ರೀಮತಿ ಚಿತ್ರಕಲಾ ಪ್ರಾರ್ಥಿಸಿದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್ ಸ್ವಾಗತಿಸಿದರು ಮತ್ತು ವರದಿ ವಾಚಿಸಿದರು, ವಂದಿಸಿದರು.