ಅಡ್ತಲೆ -ಬೆದ್ರುಪಣೆ ಪಂಚಾಯತ್ ರಸ್ತೆಯ ಕಾಂಕ್ರೀಟೀಕರಣಕ್ಕೆ ಗುದ್ದಲಿಪೂಜೆ

0

ಆರಂತೋಡು ಗ್ರಾಮದ ಅಡ್ತಲೆ -ಬೆದ್ರುಪಣೆ ಪಂಚಾಯತ್ ರಸ್ತೆಯ ದುರಸ್ತಿಗೆ ಸುಮಾರು 30ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರೀಟೀಕರಣ ನಡೆಯಲಿದ್ದು, ಇದರ ಗುದ್ದಲಿ ಪೂಜೆ ಕಾರ್ಯಕ್ರಮ ಫೆ.19ರಂದು ಅಡ್ತಲೆಯಲ್ಲಿ ಜರುಗಿತು.


ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ರವರು ದೀಪ ಬೆಳಗಿಸಿ ಶುಭ ಹಾರೈಕೆ ಯೊಂದಿಗೆ ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ವಿವರ ಮಾಹಿತಿ ನೀಡಿದರು.
ಸುಳ್ಯ ಬಿ. ಜೆ. ಪಿ. ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ಗುದ್ದಲಿಪೂಜೆ ನೆರವೇಸಿ ಅಡ್ತಲೆ ವಾರ್ಡ್ ಗೆ ನೀಡಿದ ಅನುದಾನ ಮಾಹಿತಿ ನೀಡುವುದರೊಂದಿಗೆ ಮುಂಬರುವ ಚುನಾವಣೆ ಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ, ಉಪಾಧ್ಯಕ್ಷೆ ಶ್ವೇತಾ ಅರಮನೆಗಯ, ಮಂಡಲ ಸಮಿತಿ ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿ ಗಳಾದ ಶ್ರೀಮತಿ ಗೀತಾ ಶೇಖರ್, ಹಿರಿಯರಾದ ಹೊನ್ನಪ್ಪ ಮಾಸ್ಟರ್ ಅಡ್ತಲೆ, ಚಿದಾನಂದಮಾಸ್ಟರ್ ಅಡ್ತಲೆ, ನಿವೃತ್ತ ಸಂಚಾರ ನಿಯಂತ್ರರಾದ ಹರಿಚಂದ್ರ ಮೇಲೆಅಡ್ತಲೆ, ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ ಬೆದ್ರುಪಣೆ, ಹಾಗೂ ಬಿ. ಜೆ. ಪಿ. ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರು, ಮತ್ತು ಹೆಚ್ಚಿನ ಸಂಖ್ಯೆಯ ರಸ್ತೆ ಯ ಪಲಾನುಭವಿಗಳು ಭಾಗವಹಿಸಿದ್ದರು.


ಗ್ರಾಮ ಪಂಚಾಯತ್ ಸದಸ್ಯರು, ಆರಂತೋಡು ಶಕ್ತಿಕೇಂದ್ರದ ಪ್ರಮುಖರಾದ ಕೇಶವ ಅಡ್ತಲೆ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತಾಡಿದರು. ಶ್ರೀಮತಿ ಸರಸ್ವತಿ ಟೀಚರ್ ಅಡ್ತಲೆ ಉಪಹಾರ ವ್ಯವಸ್ಥೆ ಮಾಡಿದ್ದರು
.

.