ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ

0

ಆಲೆಟ್ಟಿ ಪಂಜಿಮಲೆ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಪ್ರಯುಕ್ತ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ಯಕ್ಷಗಾನ ಬಯಲಾಟದ ಉದ್ಘಾಟನಾ ಸಮಾರಂಭ ಕ್ಲಬ್ ಅಧ್ಯಕ್ಷ ಲತೀಶ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ,ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ನಿವೃತ್ತ ಸಿ.ಇ.ಒ ಸುಧಾಮ ಆಲೆಟ್ಟಿ, ಪಂಚಾಯತ್ ಸದಸ್ಯ ಶಿವಾನಂದ ರಂಗತ್ತಮಲೆ, ವೀಣಾ ವಸಂತ ಆಲೆಟ್ಟಿ ಉಪಸ್ಥಿತರಿದ್ದರು. ಜನನಿ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ನಾಗರ ಪಂಚಮಿ ತುಳು ಯಕ್ಷಗಾನ ಬಯಲಾಟ ಪ್ರದರ್ಶನವಾಯಿತು.