ಮಹಾಶಿವರಾತ್ರಿ ಪ್ರಯುಕ್ತ ಭಕ್ತಿಗೀತೆ ಗಾನ ವೈಭವ ಕಾರ್ಯಕ್ರಮ

0

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಭಕ್ತಿಗೀತೆ ಗಾನ ವೈಭವ ಕಾರ್ಯಕ್ರಮವು ನೆರವೇರಿತು.

ಮುತ್ತು ಕೃಷಿಕ ನವೀನ್ ಚಾತುಬಾಯಿರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಸಭಾಧ್ಯಕ್ಷತೆಯನ್ನು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ ಎಚ್.ಭೀಮರಾವ್ ವಾಷ್ಠರ್ ರವರು ವಹಿಸಿ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯದ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಉಮಾದೇವಿಯವರು ಶಿವರಾತ್ರಿ ಹಬ್ಬದ ವಿಶೇಷತೆಯನ್ನು ತಿಳಿಸಿದರು.


ಬಿ.ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಗುಲ್ಬರ್ಗದ ಸಹಾಯಕ ಕೃಷಿ ನಿರ್ದೇಶಕ ಗಣಧರ.ಆರ್ ಕೋಟಿ, ಸುದ್ದಿ ಬಿಡುಗಡೆ ವಾರಪತ್ರಿಕೆಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು. ವಾಷ್ಠರ್ ಸಂಗೀತ ಬಳಗದ ಕಾರ್ಯದರ್ಶಿ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಸ್ವಾಗತಿಸಿ, ಮಮತಾ ಮಡಿಕೇರಿ ವಂದಿಸಿದರು.

ಭಕ್ತಿಗೀತೆ ಗಾನ ವೈಭವದಲ್ಲಿ ಗಾಯಕರಾದ ಸುರೇಶ ಕುಮಾರ್ ಜೆ , ಜಯಂತ್ ಮೆತ್ತಡ್ಕ , ಪ್ರವೀಣ್ ಡಿ ದೇವ , ಅಮೂಲ್ಯ ಎ ಕೆ, ತುಳಸಿ ಕೆ ಬಿ , ಭೂಮಿಕಾ ಕೆ ವಿ , ಅವನಿ ಎಂ ಎಸ್ ಸುಳ್ಯ , ಯಶ್ವಿತಾ ಕುಂಟಿನಿ , ಪ್ರಭಾವತಿ ಸುಳ್ಯ , ಪುಷ್ಪಾ ಸುಳ್ಯ , ಪೆರುಮಾಳ್ ಲಕ್ಷ್ಮಣ್ ಐವರ್ನಾಡು , ಚಂದನ್ ಸುಳ್ಯ , ಚಿನ್ಮಯ್ ಸುಳ್ಯ , ಸುಮಾ ಕೋಟೆ , ಚೆನ್ನಕೇಶವ ಮಾಸ್ಟರ್ ಸ್ಟುಡಿಯೋ , ಅಶ್ವಿಜ್ ಆತ್ರೇಯ ಸುಳ್ಯ , ಮಮತಾ ಮಡಿಕೇರಿ , ಸಾಯಿ ಪ್ರಶಾಂತ್ ಮತ್ತು ಯಮುನಾ ಹಳೆಗೇಟುರವರು ವಿವಿಧ ದೇವರ ಭಕ್ತಿಗೀತೆಗಳನ್ನು ಹಾಡಿದರು. ಎಲ್ಲಾ ಗಾಯಕರಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.