ಕಲ್ಮಡ್ಕ : ಬಡ ಮಹಿಳೆಯ ಸ್ವಾಧೀನ ಸ್ಥಳವನ್ನು ಸ್ಥಳೀಯ ನಿವಾಸಿ ಅತಿಕ್ರಮಣ ಮಾಡಿರುವ ಆರೋಪ
ಪಂಜದಲ್ಲಿ ಬೃಹತ್ ಪ್ರತಿಭಟನೆ

0

ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ದಿ.ಬಾಬು ಅಜಿಲ ಬೊಮ್ಮಟ್ಟಿ ಮನೆ ಇವರ ಪತ್ನಿ ಸೀತಮ್ಮ ಎಂಬುವವರು ತಮ್ಮ ಹಿರಿಯರ ಕಾಲದಿಂದಲೂ ಸ್ವಾಧೀನಹೊಂದಿದ್ದ ಸ್ಥಳವನ್ನು ಕಾರ್ತಿಕ್ ಭಟ್ ಎಂಬವರು ಅತಿಕ್ರಮಣ ಮಾಡಿದ್ದು ಈ ಕುರಿತು ದೂರು ನೀಡಿದ್ದರು.

ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅತಿಕ್ರಮಣ ಮಾಡಿದ ಜಾಗವನ್ನು ಇಂದೇ ತೆರವುಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ ಕೆ ಶೇಷಪ್ಪ ಬೆದ್ರಕಾಡು ನೇತೃತ್ವದಲ್ಲಿ ಪಂಜ ನಾಡಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತಿದೆ.ಗ್ರಾಮ ಲೆಕ್ಕಾಧಿಕಾರಿ ಶಿವಾಜಿ ಯವರು ಮಾತುಕತೆ ನಡೆಸಿ ಫೆ.24 ರಂದು ಅಲ್ಲಿ ಸರ್ವೆ ನಡೆಯುತ್ತದೆ ಅಲ್ಲಿ ತನಕ ಕಾಯಿರಿ ಎಂದು ಪ್ರತಿಭಟನಕಾರರ ಮನವೋಲಿಸಲು ಪ್ರಯತ್ನಿಸುತ್ತಿದ್ದು ಅದಕ್ಕೆ ಸಂಘಟನೆಯವರು ಒಪ್ಪದೇ ಪ್ರತಿಭಟನೆ ಮುಂದುವರೆದಿದೆ.

ಸುಬ್ರಹ್ಮಣ್ಯ ಪೋಲೀಸರು ಸ್ಥಳದಲ್ಲಿದ್ದಾರೆ.ಜಿಲ್ಲಾ ಸಮಿತಿಯ, ತಾಲೂಕು ಸಮಿತಿಯ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದಾರೆ.

ಬೊಮ್ಮಿಟಿ ದಿ. ಬಾಬು ಅಜಲರ ಪತ್ನಿ ಸೀತಮ್ಮ,ಅವರ‌ ಮಕ್ಕಳಾದ ಭರತ್ , ಜಯಂತಿ,ಜಿಲ್ಲಾಧ್ಯಕ್ಷ ಚಂದ್ರಶೇಖರ ಯು, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮರ್ , ಗೌರವಾಧ್ಯಕ್ಷ ಸೋಮಪ್ಪ ನಾಯ್ಕ, ಜಿಲ್ಲಾ ಮಹಿಳಾ ಅಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ಉಪಾಧ್ಯಕ್ಷೆ ವಿಮಲ ಮುಳ್ಯ ,ಪುತ್ತೂರು ತಾಲೂಕು ಅಧ್ಯಕ್ಷ ಬಿ ಕೆ ಅಣ್ಣಪ್ಪ, ಬಂಟ್ವಾಳ ತಾಲೂಕು ಅಧ್ಯಕ್ಷ ವಸಂತ ಕುಕ್ಕೆಬೆಟ್ಟು,ಕಡಬ ತಾಲೂಕು ಅಧ್ಯಕ್ಷ ಯಶವಂತ, ಮಾಜಿ ಅಧ್ಯಕ್ಷ ಕೇಶವ,ರಾಮಣ್ಣ ಪಂಜ, ಕೆ ಪಿ ಆನಂದ, ಗಣೇಶ, ಕುಶಾಲಪ್ಪ, ಸದಸ್ಯರು ಉಪಸ್ಥಿತರಿದ್ದರು.