ಬಿದ್ದು ಸಿಕ್ಕಿದ ಮೊಬೈಲ್ ಫೋನನ್ನು ಸುಳ್ಯ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ

0

ಬಿದ್ದು ಸಿಕ್ಕಿದ ಮೊಬೈಲ್ ಫೋನನ್ನು ಸುಳ್ಯ ಪೊಲೀಸ್ ಠಾಣೆಗೆ ಒಪ್ಪಿಸಿ ಗೋಪಾಲ ಇರಂತಕಜೆಯವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಸುಳ್ಯ ಸಿಎ ಬ್ಯಾಂಕ್ ಹಿಂಬದಿಯಲ್ಲಿ ಫೆಬ್ರವರಿ 21ರಂದು ಬೆಳಿಗ್ಗೆ ಸ್ಥಳೀಯ ಸಂಸ್ಥೆಯೊಂದರಲ್ಲಿ ಪಿಕಪ್ ಚಾಲಕನಾಗಿ ಕೆಲಸ ನಿರ್ವಹಿಸುವ ಅಂಬೇಡ್ಕರ್ ರಕ್ಷಣಾ ವೇದಿಕೆಯ ಸುಳ್ಯ ತಾಲೂಕು ಸಮಿತಿ ಸದಸ್ಯರು ಆಗಿರುವ ಗೋಪಾಲ ಇರಂತಕಜೆ ಎಂಬುವರಿಗೆ ಎರಡು ಬೆಲೆಬಾಳುವ ಮೊಬೈಲ್ ಫೋನ್ಗಳು ಬಿದ್ದು ಸಿಕ್ಕಿತ್ತು.

ಅವರು ಕೂಡಲೇ ಅದನ್ನು ಸುದ್ದಿ ಪತ್ರಿಕಾ ಕಚೇರಿಗೆ ಮಾಹಿತಿ ನೀಡಿ ಅವರ ಸಲಹೆಯಂತೆ ಸುಳ್ಯ ಪೊಲೀಸ್ ಠಾಣೆಗೆ ಕೊಂಡುಹೋಗಿ ಒಪ್ಪಿಸಿದರು.

ಮೊಬೈಲ್ ಫೋನ್ ಗಳು ಲಾಕ್ ಮಾಡದ ಕಾರಣ ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ ಫೋನ್ ಮಾಡಿ ಅವರು ಮೊಬೈಲ್ ಫೋನ್ ತಮಗೆ ಸಿಕ್ಕಿರುವ ವಿಷಯ ಮತ್ತು ಅದನ್ನು ಸುಳ್ಯ ಪೊಲೀಸ್ ಠಾಣೆಗೆ ಒಪ್ಪಿಸಿರುವ ವಿಷಯವನ್ನು ತಿಳಿಸಿದ್ದಾರೆ.

ಮಾಹಿತಿ ತಿಳಿದ ಒಂದು ಫೋನಿನ ವ್ಯಕ್ತಿ ಸನಾಫ್ ಎಂಬವರು ಸುಳ್ಯ ಠಾಣೆಗೆ ಬಂದಿದ್ದು ತಮ್ಮ ಮೊಬೈಲ್ ಫೋನಿನ ಗುರುತುಗಳನ್ನು ನೀಡಿ ದ್ದಾರೆ.
ಅವರು ಮೂಲತಃ ಕಾಸರಗೋಡಿನ ನಿವಾಸಿಯಾಗಿದ್ದು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವವರಾಗಿದ್ದರು.
ಸುಳ್ಯದಲ್ಲಿ ರಬ್ಬರ್ ಮರಗಳನ್ನು ಲೀಸಿಗೆ ಪಡೆಯಲು ನೋಡಲು ಬಂದವರು ಸಿ ಎ ಬ್ಯಾಂಕ್ ಬಳಿ ತಮ್ಮ ಕೈ ಯಿಂದ ಕಳೆದು ಕೊಂಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.
ಬಳಿಕ ಎಸ್ ಐ ದಿಲೀಪ್ ರವರ ಮಾರ್ಗದರ್ಶನದಂತೆ ಇ. ಲಾಸ್ಟ್ ಮೂಲಕ ದೂರು ನೀಡಿ ಅದನ್ನು ಪಡೆದುಕೊಂಡಿದ್ದಾರೆ.

ಈ ಸಂಧರ್ಭ ಫೋನ್ ಗಳನ್ನು ತಂದು ಠಾಣೆಗೆ ಒಪ್ಪಿಸಿದ್ದ ಗೊಪಾಲರವರು ಉಪಸ್ಥಿತರಿದ್ದರು.