ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ಪಂಚಾಯತ್ ನಿಂದ ದಂಡ

0

ತ್ಯಾಜ್ಯ ಎಸೆದವರಿಂದಲೆ ವಿಲೇವಾರಿ ಮಾಡಿಸಿದ ಪಂಚಾಯತ್

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ಫೆ.15 ರಂದು ತ್ಯಾಜ್ಯ ಎಸೆದ ಸುಳ್ಯದ ನಿವಾಸಿಗಳಿಗೆ ರೂ 6000.00 ದಂಡ ವಿಧಿಸಿದ ಘಟನೆ ಫೆ 21 ರಂದು ನಡೆದಿದೆ.


ಫೆ 15 ರಂದು ಬೇಂಗಮಲೆ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು ದಿನಾಂಕ 15/02/2023 ರಂದು ಬೇಂಗಮಲೆ ಪರಿಸರಕ್ಕೆ ಭೇಟಿ ನೀಡಿ ಸಿ ಸಿ ಕ್ಯಾಮರ ದೃಶ್ಯ ಪರಿಶೀಲಿಸಿ ಹಾಗೂ ಅಲ್ಲಿ ತ್ಯಾಜ್ಯ ಎಸೆದ ಬ್ಯಾಗ್ ಗಳನ್ನು ಪರಿಶೀಲಿಸಿ ತ್ಯಾಜ್ಯ ಬಿಸಾಡಿದ ಸುಳ್ಯದ ಯುವಕನನ್ನು ಪತ್ತೆ ಹಚ್ಚಿ ದಿನಾಂಕ 21/02/2023 ರಂದು ರೂ 6000.00 ದಂಡ ವಿಧಿಸಲಾಯಿತು.ಬಳಿಕ ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯವನ್ನು ವಿಲೇವಾರಿಗೊಳಿಸಲಾಯಿತೆಂದು ತಿಳಿದು ಬಂದಿದೆ.