ಫೆ. 23 : ಸುಳ್ಯ ರೈತ ಉತ್ಪಾದಕ ಕಂಪೆನಿಯ ಬೆಳ್ಳಾರೆ ಶಾಖೆ ಆರಂಭ

0


ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಜಲಾಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಅಟಲ್ ಇನ್ಕ್ಯುಬೇಷನ್ ಸೆಂಟರ್ ನಿಟ್ಟೆ ಇವುಗಳ ಸಹಕಾರದಲ್ಲಿ ಆರಂಭಗೊಂಡ ಸುಳ್ಯ ರೈತ ಉತ್ಪಾದಕ ಕಂಪೆನಿ (ನಿ) ಇದರ ಬೆಳ್ಳಾರೆ ಶಾಖೆಯ ಉದ್ಘಾಟನಾ ಸಮಾರಂಭವು ಫೆಬ್ರವರಿ 23 ರಂದು ಪೂರ್ವಾಹ್ನ 10:3೦ಕ್ಕೆ ಶ್ರೀ ಕೃಷ್ಣ ಆರ್ಕೇಡ್ ಮಾಸ್ತಿಕಟ್ಟೆ ಬೆಳ್ಳಾರೆಯಲ್ಲಿ ನಡೆಯಲಿದೆ. ಕಂಪೆನಿಯ ಷೇರು ಪ್ರಮಾಣ ಪತ್ರವನ್ನು ಪಡೆದುಕೊಳ್ಳದೆ ಇರುವ ಸದಸ್ಯರಿಗೆ ಬೆಳ್ಳಾರೆಯಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.