ಸುಳ್ಯದ ಕೆವಿಜಿ ಕ್ಯಾಂಪಸ್ ಬಳಿ ಕಾಮತ್ ಕೆಫೆ ಶುಭಾರಂಭ

0

ಕ್ಯಾಂಪಸ್ ಗೆ ಅಗತ್ಯವಿರುವ ಉದ್ಯಮವನ್ನೆ ಆರಂಭಿಸಿದ್ದಾರೆ: ಎನ್ ಎ ರಾಮಚಂದ್ರ

ಒಳ್ಳೆಯ ಆಹಾರ ಸಿಗುವಂತಹ ರೆಸ್ಟೋರೆಂಟ್ ಗಳ ಹೆಸರಿಗೆ ಸೇರಲಿ: ಪಾ.ವಿಕ್ಟರ್ ಡಿಸೋಜ

ಸುಳ್ಯ ಅಭಿವೃದ್ಧಿ ಯಾಗುವುದರೊಂದಿಗೆ ಉದ್ಯಮವು ಅಭಿವೃದ್ಧಿಯಾಗಲಿ: ವಿನಯ ಕುಮಾರ್ ಕಂದಡ್ಕ

ಸುಳ್ಯ ಕೆವಿಜಿ ಕ್ಯಾಂಪಸ್ ಬಳಿ ಕಾಮತ್ ಕೆಫೆಯವರ ನೂತನ ಶುದ್ದ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ ಫೆ.22 ರಂದು ಶುಭಾರಂಭ ಗೊಂಡಿತು.


ಇದರ ಉದ್ಘಾಟನೆಯನ್ನು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ ನೆರವೇರಿಸಿದರು.


ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುದಾಕರ ರೈ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ
ಶ್ರೀ ವಿನಯ ಕುಮಾರ್ ಕಂದಡ್ಕ ,
ಎಂ ಬಿ ಫೌಂಡೇಶನ್ ನ ಅಧ್ಯಕ್ಷ ಎಂ ಬಿ ಸದಾಶಿವ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ,ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ ಎಂ ಶಹೀದ್,
ಸುಳ್ಯ ನಗರ ಪಂಚಾಯತ್‌ ಸದಸ್ಯೆ ಶೀಲಾವತಿ ಕುರುಂಜಿ,
ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಲೀಲಾದರ್,ಸುಳ್ಯ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ದೊಡ್ಡಣ್ಣ ಬರಮೇಲು,ಹಾಜಿ ಅಬ್ದುಲ್‌ ಖಾದರ್ ಪಟೇಲ್,ವರ್ತಕರ ಸಂಘದ ಕಾರ್ಯದರ್ಶಿ ಡಿ ಎಸ್ ಗಿರೀಶ್,ರಾಜೇಶ್ ಶೆಟ್ಟಿ ಮೇನಾಲ,ಮಾಧವ ಗೌಡ,ಪತ್ರಕರ್ತ ಶರೀಫ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.


ಸಂಸ್ಥೆಯ ಪಾಲುದಾರರಾದ ಅನಂತ ಪದ್ಮನಾಭ ಕಿಣಿ,ರವೀಂದ್ರ ಪೈ,ಅಶೋಕ, ಜಯಪ್ರಕಾಶ್ ಸರ್ವರನ್ನೂ ಸ್ವಾಗತಿಸಿ ಬರಮಾಡಿಕೊಂಡರು.
ನೊರ್ತ್ ಇಂಡಿಯನ್, ಚೈನೀಸ್, ಸೌತ್ ಇಂಡಿಯನ್, ತಂದೂರಿ,ವಿವಿಧ ಬಗ್ಗೆ ದೋಸೆಗಳು,ಜ್ಯೂಸ್, ಐಸ್ಕ್ರೀಮ್,ಇನ್ನಿತರ ಶುಧ್ಧ ಸಸ್ಯಹಾರಿ ಆಹಾರ ಪದಾರ್ಥಗಳು ದೊರೆಯುತ್ತದೆ.
ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಶುದ್ದ ಸಸ್ಯಹಾರದ ಕೆಟರಿಂಗ್ ವ್ಯವಸ್ಥೆಯಿದೆ ಎಂದು ಪಾಲುದಾರರು ತಿಳಿಸಿದ್ದಾರೆ.