ಮಾರ್ಚ್ 10, 11 : ಕೇರ್ಪಡ ಪಲ್ಲಡ್ಕದಲ್ಲಿ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ನೇಮೋತ್ಸವ

0

ಕೇರ್ಪಡ ಪಲ್ಲಡ್ಕದ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನದಲ್ಲಿ ವರ್ಷಂಪ್ರತಿಯಂತೆ ಮಾರ್ಚ್ 10 ಮತ್ತು 11ರಂದು ನೇಮೋತ್ಸವ ನಡೆಯಲಿರುವುದು.
ಮಾರ್ಚ್ 10ರಂದು ಸಂಜೆ ಭಂಡಾರ ಹಿಡಿದು, ರಾತ್ರಿ 9.15ಕ್ಕೆ ಆದಿಮೊಗೇರ್ಕಳ ಗರಡಿ ಇಳಿ, ರಾತ್ರಿ 8 ಗಂಟೆಗೆ ಕಿನ್ನಿ ಮಾಣಿ ಗರಡಿ ಇಳಿಯುವುದು ನಡೆಯಲಿದೆ ಮಾರ್ಚ್ 11ರಂದು ಬೆಳಿಗ್ಗೆ ಪೂಜಾರಿಗಳಿಗೆ ಸೇಟಾಗುವುದು, 6 ಗಂಟೆಗೆ ಕೊರಗ ತನಿಯ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಲಿದೆ.
ಮಾರ್ಚ್ 10ರಂದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ತನು-ಮನ- ಧನ ಸಹಾಯ ನೀಡಬೇಕೆಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.