ಕುರುಂಜಿಗುಡ್ಡೆಯಲ್ಲಿ ನ.ಪಂ. ನಿಂದ ಹೊಸ ರಸ್ತೆ ನಿರ್ಮಾಣ : ಬಹುಕಾಲದ ಬೇಡಿಕೆ ಈಡೇರಿಕೆ

0

ರಸ್ತೆ ನಿರ್ಮಾಣಕ್ಕೆ ಸ್ಥಳ ಬಿಡುವಂತೆ ಮನೆ ಮನೆಗೆ ಹೋಗಿ ಕೇಳಿದ ವಿನಯ್ ಕಂದಡ್ಕ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕುರುಂಜಿಗುಡ್ಡೆಯಲ್ಲಿ ಸುಮಾರು 8-1೦ ಮನೆಗಳವರ ಬೇಡಿಕೆಯಂತೆ ನ.ಪಂ. ನಿಂದ ಹೊಸ ರಸ್ತೆ ನಿರ್ಮಾಣ ಮಾಡಲಾಗಿದೆ.
ಕುರುಂಜಿಗುಡ್ಡೆಯ ೮-೧೦ ಮನೆಗಳವರಿಗೆ ಹೋಗುಲು ಸುಸಜ್ಜಿತವಾದ ರಸ್ತೆ ವ್ಯವಸ್ಥೆ ಇರಲಿಲ್ಲ. ಸಣ್ಣ ಕಾಲು ದಾರಿಯಲ್ಲಿ ಸಂಚರಿಸಬೇಕಾಗಿತ್ತು. ಪ್ರತೀ ಚುನಾವಣೆಯ ಸಂದರ್ಭದಲ್ಲಿಯೂ ಈ ಭಾಗದ ಜನರು ರಸ್ತೆಯ ಬೇಡಿಕೆಯನ್ನು ಮುಂದಿಡುತ್ತಿದ್ದರು. ಈ ಬಾರಿ ಸುಳ್ಯ ನ.ಪಂ. ಅಧ್ಯಕ್ಷ, ಕುರುಂಜಿಗುಡ್ಡೆ ವಾರ್ಡ್ ಸದಸ್ಯರೂ ಆಗಿರುವ ವಿನಯ ಕುಮಾರ್ ಕಂದಡ್ಕರವರು ಮನೆ ಮನೆಗೆ ಹೋಗಿ, ಕಾಲು ರಸ್ತೆಯನ್ನು ರಸ್ತೆಯಾಗಿ ಅಗಲಗೊಳಿಸಲು ಸ್ಥಳಾವಕಾಶ ಮಾಡಿಕೊಡಬೇಕೆಂದು ವಿನಂತಿಸಿ ಅವರ ಒಪ್ಪಿಗೆ ಪಡೆದು ೧೦ ಫೀಟ್ ಅಗಲದಲ್ಲಿ ರಸ್ತೆ ನಿರ್ಮಾಣ ಕೆಲಸ ಮಾಡಿದ್ದಾರೆ.


ರಸ್ತೆ ನಿರ್ಮಾಣಕ್ಕೆ ಸ್ಥಳೀಯರಾದ ಚೆನ್ನಯ್ಯ ಕುರುಂಜಿಗುಡ್ಡೆ, ಉಪೇಂದ್ರ ನಾಯಕ್, ಸರಸ್ವತಿ, ಸ್ವಾಮಿನಾಥನ್, ಚಿನ್ನಸ್ವಾಮಿ, ಉದಯ ಕುರುಂಜಿಗುಡ್ಡೆ, ಮಣಿ ಕುರುಂಜಿಗುಡ್ಡೆ, ಸುಂದರ ಕುರುಂಜಿಗುಡ್ಡೆಯವರು 1೦ ಫೀಟ್ ರಸ್ತೆ ನಿರ್ಮಾಣಕ್ಕೆ ಬೇಕಾದಷ್ಟು ಜಾಗವನ್ನು ನೀಡಿದ್ದಾರೆ.
“ಈ ಭಾಗದಲ್ಲಿ ರಸ್ತೆ ವ್ಯವಸ್ಥೆ ಬೇಕೆಂದು ಇಲ್ಲಿಯ ಜನರ ಬೇಡಿಕೆಯಾಗಿತ್ತು. ಇದೀಗ ನ.ಪಂ. ವತಿಯಿಂದ ರಸ್ತೆ ನಿರ್ಮಾಣ ಕಾರ್ಯ ಮಾಡಲಾಗಿದೆ. ಮುಂದಿನ ದಿನದಲ್ಲಿ ರಸ್ತೆ ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು”
-ವಿನಯ ಕಂದಡ್ಕ ಅಧ್ಯಕ್ಷರು ನ.ಪಂ. ಸುಳ್ಯ
ನಮ್ಮ ಮನೆಗಳಿಗೆ ಹೋಗಲು ವ್ಯವಸ್ಥಿತ ರಸ್ತೆ ಇರಲಿಲ್ಲ. ಜಾಗ ಕೊಡುತ್ತೇವೆಂದರೂ ರಸ್ತೆ ಆಗಿರಲಿಲ್ಲ. ಇದೀಗ ಸುಸಜ್ಜಿತ ರಸ್ತೆ ವ್ಯವಸ್ಥೆ ಆಗಿದೆ”
-ಶ್ರೀಮತಿ ಆಶಾ ಕೀರ್ತಿ ಸುಂದರ ಕುರುಂಜಿಗುಡ್ಡೆ