ಆಲೆಟ್ಟಿ : ಮೊರಂಗಲ್ಲು ಕಾಲನಿ ನಿವಾಸಿ ಅಶೋಕ ಎರಡು ದಿನಗಳಿಂದ ನಾಪತ್ತೆ

0

ಆಲೆಟ್ಟಿ ಗ್ರಾಮದ ಮೊರಂಗಲ್ಲು ಕಾಲನಿ ನಿವಾಸಿ ಅಶೋಕ ಎಂಬಾತ ಕಳೆದ ಶುಕ್ರವಾರದಿಂದ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಅಶೋಕ ಸುಳ್ಯದಲ್ಲಿ ಸರ್ವಿಸ್ ಸ್ಟೇಷನ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಫೆ.24 ರಂದು ಮನೆಯಿಂದ ಬೆಳಗ್ಗೆ ಹೊರಟು ಬಂದವರು ಮತ್ತೆ ಹಿಂತಿರುಗಿ ಮನೆಗೆ ಬರಲಿಲ್ಲ. ಮನೆಗೆ ಬಾರದಿರುವ ಕುರಿತು ಆತನ ಪತ್ನಿ ಸ್ಥಳೀಯ ಸಂಬಂಧಿಕರ ಜತೆ ವಿಷಯ ತಿಳಿಸಿದರು. ಬಳಿಕ ಕಾಲನಿಯ ಯುವಕರು ಹಾಗೂ ಆತನ ಬಂಧುಗಳು ಸೇರಿ ಸಂಬಂಧಿಕರ ಹಾಗೂ ಸ್ನೇಹಿತರ ಮನೆಯಲ್ಲಿ ವಿಚಾರಿಸಿರುವುದಲ್ಲದೆ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಸಂಪರ್ಕಕ್ಕೆ ಸಿಗಲಿಲ್ಲ. ಅಶೋಕ ರವರು ವಿವಾಹಿತರಾಗಿದ್ದು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಮಾತ್ರ ಮನೆಯಲ್ಲಿ ಇರುವುದಾಗಿ ತಿಳಿದು ಬಂದಿದೆ. ಕಾಣೆಯಾಗಿರುವ ಬಗ್ಗೆ ಆತನ ಸಂಬಂಧಿಕರು ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.