ಪಂಜ : ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮ

0

ಜೇಸಿ ಐ ಪಂಜ ಪಂಚಶ್ರೀ ಇದರ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮವು ಫೆ.25 ರಂದು ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ವಲಯ ಉಪಾಧ್ಯಕ್ಷ JFM ಅಜಿತ್ ಕುಮಾರ್ ರೈ ಉಪಸ್ಥಿತರಿದ್ದರು.


ಪಂಜ ಮೆಸ್ಕಾಂ ಶಾಖಾ ಕಚೇರಿಯ ಮೆಕಾನಿಕಲ್ ಗ್ರೇಡ್ ll ಹರ್ಷ ಕುಮಾರ್ ರನ್ನು ಮುಖ್ಯ ಅತಿಥಿಗಳು ಪುರಸ್ಕರಿಸಿದ್ದರು.
ಕಾರ್ಯಕ್ರಮ ನಿರ್ದೇಶಕ ಗಗನ್ ಕಿನ್ನಿಕುಮೇರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೇಸಿ ಸದಸ್ಯರಾದ ಕಿರಣ್ ಕಂರ್ಬು ನೆಕ್ಕಿಲ ವೇದಿಕೆಗೆ ಆಹ್ವಾನಿಸಿದರು, ಸುಬ್ರಹ್ಮಣ್ಯ ಕುದ್ಪಾಜೆ ಪುರಸ್ಕೃತರನ್ನು ಪರಿಚಯಿಸಿದರು.ಜ ಜೀವನ್ ಶೆಟ್ಟಿಗದ್ದೆ ವಲಯ ಉಪಾಧ್ಯಕ್ಷರ ಪರಿಚಯಿಸಿದರು. ಶ್ರೇಯಸ್ಸು ತುಪ್ಪ ಮನೆ ಜೇಸಿ ವಾಣಿ ವಾಚಿಸಿದರು.ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವಂದಿಸಿದರು.