ತನ್ವಿ ತಂಟೆಪ್ಪಾಡಿ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಆಯ್ಕೆ

0

ಕರ್ನಾಟಕ ಯೋಗಾಸನ ಅಸೋಸಿಯೇಷನ್ ವತಿಯಿಂದ ಫೆ. 26 ಮೈಸೂರಿನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ 9ರಿಂದ 12 ವರ್ಷ ವಯೋಮಾನದಲ್ಲಿ ಭಾಗವಹಿಸಿದ ಚೊಕ್ಕಾಡಿ ಆಂಗ್ಲಮಾಧ್ಯಮ ಶಾಲೆ ಕುಕ್ಕುಜಡ್ಕದ 4 ನೇ ತರಗತಿ ವಿದ್ಯಾರ್ಥಿನಿ ಕು. ತನ್ವಿ ತಂಟೆಪ್ಪಾಡಿ 6 ನೇ ಸ್ಥಾನ ಪಡೆದು ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ. ನಿರಂತರ ಯೋಗಕೇಂದ್ರ ಸುಳ್ಯ ಇದರ ವಿದ್ಯಾರ್ಥಿನಿಯಾಗಿರುವ ಇವರು ಯೋಗಗುರು ಶರತ್ ಮರ್ಗಿಲಡ್ಕ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರು ಕಳಂಜ ಗ್ರಾಮದ ತಂಟೆಪ್ಪಾಡಿ ಶೇಷಪ್ಪ ನಾಯ್ಕರ ಮೊಮ್ಮಗಳು ಹಾಗೂ ಹರಿಶ್ಚಂದ್ರ ಮತ್ತು ಜ್ಯೋತಿ ದಂಪತಿಯವರ ಪುತ್ರಿ.