ಆಧ್ಯಾತ್ಮಿಕ ಕವಾಲಿ ಇಶಲ್ ನೈಟ್ ಹಾಗೂ ಭಕ್ತರ ದರ್ಗಾ ಝಿಯಾರತಿ ನೊಂದಿಗೆ ಮೊಗರ್ಪಣೆ ಉರೂಸ್ ಸಂಪನ್ನ

0

ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿದ ಅಸ್ಸಯಿದ್ ಶಮೀಮ್ ತಂಙಳ್ ಕುಂಬೋಳ್

ಸುಳ್ಯ ಮೊಗರ್ಪಣೆ ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ಅಸ್ಸಖಾಫ್ ಅಲ್ ಖಾದಿರಿ ಮಖಾಂ ಉರೂಸ್ ಕಾರ್ಯಕ್ರಮದ
ಸಮಾರೋಪ ಸಮಾರಂಭ ಸುಪ್ರಸಿದ್ಧ ಇಸ್ಲಾಮಿಕ್ ಗಾಯಕ ಕೋಯ ಕಾಪಾಡ್ ತಂಡದವರಿಂದ ಕವಾಲಿ ಹಾಗೂ ಇಶಲ್ ನೈಟ್, ಸಾವಿರಾರು ಮಂದಿ ಭಕ್ತರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಫೆ.26 ರಂದು ಸಂಪನ್ನಗೊಂಡಿತು.

ಸಂಜೆ 7 ಗಂಟೆಗೆ ದರ್ಗಾ ಶರೀಫಿನಲ್ಲಿ ಮೌಲಿದ್ ಪಾರಾಯಣ ನಡೆದ ಬಳಿಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಧಾರ್ಮಿಕ ಹಾಡುಗಳ ಗಾಯಕ ಮತ್ತು ಪಂಡಿತ ಡಾ.ಕೋಯ ಕಾಪಾಡ್,ಶಮ್ಮಾಸ್ ಕಾಂತಪುರಂ,ನಿಯಾಜ್ ತಂಡದವರಿಂದ ಇಸ್ಲಾಮಿನ ಚರಿತ್ರೆಯನ್ನು ನೆನಪಿಸುವ ಆಕರ್ಷಕ ಕವಾಲಿ,ಇಸ್ಲಾಮಿಕ್ ಹಾಡುಗಳು ನಡುವೆ ಇತಿಹಾಸದ ಬಗ್ಗೆ ಕ್ವಿಜ್ ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡುವ ಕಾರ್ಯಕ್ರಮಗಳು ನಡೆಯಿತು.

ಉರೂಸ್ ಸಮಾರೋಪ ಸಮಾರಂಭದ ಸಾಮೂಹಿಕ ಪ್ರಾರ್ಥನೆಯನ್ನು ಕೇರಳದ ಅಸ್ಸಯ್ಯಿದ್ ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ನೆರವೇರಿಸಿದರು.

ಇದಕ್ಕೂ ಮುನ್ನ ಖ್ಯಾತ ವಾಗ್ಮಿ ಹಂಝಾ ಮಿಸ್ಬಾಯಿ ಓಟಪದವು ಧಾರ್ಮಿಕ ಪ್ರಭಾಷಣವನ್ನು ಮಾಡಿ ಮನುಷ್ಯರು ತಮ್ಮ ಅಹಂಕಾರವನ್ನು ಮನಸ್ಸಿನಿಂದ ಸಂಪೂರ್ಣವಾಗಿ ತ್ಯಜಿಸಿ ಸರ್ವಶಕ್ತನಾದ ಅಲ್ಲಾಹನ ಮುಂದೆ ಪಾಪ ವಿಮೋಚನೆಯನ್ನು ಮಾಡಿದರೆ ಮಾತ್ರ ಈ ಲೋಕದಲ್ಲೂ ಪರಲೋಕದಲ್ಲೂ ವಿಜಯಿಸಲು ಸಾಧ್ಯ ಎಂದು ಹೇಳಿದರು.

ಸ್ಥಳಿಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಮೂರು ದಿನಗಳ ಉರೂಸ್ ಸಂಭ್ರಮಾಚರಣೆಯಲ್ಲಿ ಯಶಸ್ವಿಗೆ ಹಗಲಿರುಳು ದುಡಿದು ಸಹಕಾರ ನೀಡಿದ ಸರ್ವ ಜನತೆಗೆ, ಸ್ಥಳೀಯ ಜಮಾಅತಿನ ಯುವಕರ ತಂಡಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀಫುಡ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಕೇರಳ ಸರ್ಕಾರದ ಜಾನಪದ ಅಕಾಡೆಮಿಯ ಉಪಾಧ್ಯಕ್ಷ ಕೋಯಾ ಕಾಪಾಡ್ ಅವರನ್ನು ಜಮಾಅತ್ ಕಮಿಟಿ,ಉಡುಪಿ ದ ಕ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮತ್ತು ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಕಾಫಿ, ಅಧ್ಯಕ್ಷ ಕೆ. ಎಂ.ಮುಸ್ತಫ,ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್.ಸಂಶುದ್ದೀನ್,ಎಚ್ ಐ ಜೆ ಕಮಿಟಿ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ಕಮ್ಮಾಡಿ, ಹೆಚ್.ಐ ಕಮಿಟಿ ಪ್ರಧಾನ ಕಾರ್ಯದರ್ಶಿ ಎಸ್.ಯು. ಇಬ್ರಾಹಿಂ, ಉಪಾಧ್ಯಕ್ಷ ಸಿ. ಎಂ.ಉಸ್ಮಾನ್,ಮೊಗರ್ಪಣೆ ನೂರುಲ್ ಇಸ್ಲಾಂ ಮದ್ರಸ ಸದರ್ ಮುಅಲ್ಲಿಮ್ ಕೆ.ಯು.ಮುಹಮ್ಮದ್ ಸಖಾಫಿ ಅಲ್ ಹಿಕಮಿ,ಮದರಸ ಮೊಅಲ್ಲಿಂರಾದ ನಾಸಿರ್ ಸಕಾಫಿ, ಅಂಝ ಸಖಾಫಿ, ಯೂಸುಫ್ ನಿಜಾಮಿ, ಮೂಸಾ ಮುಸ್ಲಿಯಾರ್,ಜಮಾಅತ್ ಕಮಿಟಿ ಕೋಶಾಧಿಕಾರಿ ಮಹಮ್ಮದ್ ಆದರ್ಶ, ಕಾರ್ಯದರ್ಶಿ ಅಬ್ದುಲ್ ರಹೀಂ ಸಂಗಮ್, ಗೂನಡ್ಕ ಮಸೀದಿ ಖತೀಬರಾದ ಮಹಮ್ಮದ್ ಅಲಿ ಸಕಾಫಿ,ಅಬ್ದುಲ್ ಲತೀಫ್ ಗೂನಡ್ಕ, ಶಾಂತಿನಗರ ಮದರಸ ಅಧ್ಯಕ್ಷ ಹಾಜಿ ಪಳ್ಳಿ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.
ಮಸೀದಿ ಕಟ್ಟಡ ಸಮಿತಿ ಸಂಚಾಲಕ ಹಾಜಿ ಅಬ್ದುಲ್ ಸಮದ್ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಮುದರ್ರಿಸ್ ಶೌಕತ್ ಅಲಿ ಸಕಾಫಿ ಧನ್ಯವಾದ ಸಲ್ಲಿಸಿದರು.

ಉರೂಸ್ ಸಮಾರಂಭದಲ್ಲಿ ನಾಲಕ್ಕು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಸ್ವೀಕರಿಸಿದರು. ಸ್ಥಳೀಯ ಜಮಾಅತಿನ ನೂರಾರು ಯುವಕರು ಸ್ವಯಂ ಸೇವಕರಾಗಿ ಸಮಾರಂಭದಲ್ಲಿ ಸಹಕರಿಸಿದರು.