ಸುಳ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕಾರ್ಯಾಗಾರ

0

ಇಂದಿನ ಸಮಾಜದಲ್ಲಿ ಕ್ರೌರ್ಯಗಳು, ಆತ್ಮಹತ್ಯೆಗಳು, ವಿಚ್ಛೇದನಗಳು, ಕೌಟುಂಬಿಕ ಸಮಸ್ಯೆಗಳು, ಹೆಚ್ಚಾಗುತ್ತಿದ್ದು ಇದು ಮನುಷ್ಯನ ಮಾನಸಿಕ ಆರೋಗ್ಯದ ಕೊರತೆಯಿಂದ ಉಂಟಾಗುತ್ತದೆ ಎಂಬುದು ಅಧ್ಯಯನ ದಿಂದ ತಿಳಿದು ಬರುತ್ತದೆ ಈ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗುವುದು ಎಂದು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಹೇಳಿದರು ಸುಳ್ಯ ವರ್ತಕರ ಸಮುದಾಯ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ವರ್ತಕರ ಸಂಘ, ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಶಾಖೆ, ತಾಲೂಕು ಆರೋಗ್ಯಾದಿ ಕಾರಿಗಳ ಕಚೇರಿ, ಇವುಗಳ ಸಂಯುಕ್ತ ಆಶ್ರಯ ದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಆಯೋಜಿಸಲಾದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಗಳ ಕಾರ್ಯಗಾರ ದಲ್ಲಿ ಭಾಗವಹಿಸಿ ಮಾತನಾತ್ತಿದ್ದರು.


ಸಭಾಧ್ಯಕ್ಷತೆಯನ್ನು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಘಟಕದ ಸಭಾಪತಿ ಪಿ. ಬಿ. ಸುಧಾಕರ ರೈ ನೆಟ್ಕಾಮ್ ವಹಿಸಿದ್ದರು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಎಲ್ ಇ ಡಿ ಪರದೆಯಲ್ಲಿ ಪ್ರಾತಕ್ಷ ದೊಂದಿಗೆ ಪ್ರಥಮ ಅಧಿವೇಶನವನ್ನು ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ, ದಂತಭಾಗ್ಯ,ತಾಯಿ ಮತ್ತು ಮಕ್ಕಳ ಆರೋಗ್ಯಶಿಬಿರ,ಯುವಕ-ಯುವತಿಯರಲ್ಲಿ ರಕ್ತಹೀನತೆ,ಅಯೋಡಿನ್ ಕೊರತೆ,ಪೌಷ್ಟಿಕಾಂಶಗಳ ಕೊರತೆ,ಮಕ್ಕಳಿಗೆ ಹೊಟ್ಟೆ ಹುಳು ನಿವಾರಣೆ, ಕೌನ್ಸಿಲಿಂಗ್ ಮಾಡುವ ಸ್ನೇಹ ಕ್ಲಿನಿಕ್, ಕ್ಷಯರೋಗ ನಿರ್ಮೂಲನೆ ಅಭಿಯಾನ, ರೇಬಿಸ್ ನಿಯಂತ್ರಣ, ಚರ್ಮದ ಮಚ್ಚೆಯ ಶಸ್ತ್ರ ಕ್ರಿಯೆ, ಮೊದಲಾದ ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಎರಡನೇ ಅಧಿವೇಶನದಲ್ಲಿ ಸುಳ್ಯ ಆರೋಗ್ಯ ಸಮುದಾಯ ಕೇಂದ್ರ ಆರೋಗ್ಯ ಮಿತ್ರ ಮುರಳಿ ಅವರು ಪಿಎಚ್ಎಫ್ ಆಪ್ ಮತ್ತು ಆಯುಷ್ಮಾನ್ ಕಾರ್ಡ್,ಯಶಸ್ವಿನಿ ಮೊದಲಾದ ಅರೋಗ್ಯ ಕಾರ್ಡ್ ಗಳ ಬಗ್ಗೆ ಮಾಹಿತಿ ನೀಡಿದರು ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕದ ಉಪಸಭಾಪತಿ ಕೆ.ಎಂ. ಮುಸ್ತಫ, ಕೋಶಾಧಿಕಾರಿ ವಿನಯಕುಮಾರ್, ನಿರ್ದೇಶಕರು ಗಳಾದ ಸಂಜೀವ ಕುದ್ಪಾಜೆ, ಶ್ರೀಮತಿ ಪದ್ಮಿನಿ, ಪ್ರಥ್ವಿಕುಮಾರ್,ಜಿಲ್ಲಾ ಘಟಕದ ಪ್ರತಿನಿಧಿ ಗಣೇಶ್ ಭಟ್, ವರ್ತಕರ ಸಂಘದ ಕಾರ್ಯದರ್ಶಿ ಗಿರೀಶ್ ಡಿ.ಎಸ್.ರೆಡ್ ಕ್ರಾಸ್ ಸದಸ್ಯರುಗಳಾದ
ಮಹಾದೇವ್,,ಶಿವಪ್ರಸಾದ್, ಅರೋಗ್ಯ ಇಲಾಖೆ ಯ ಬೀನಾ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು