ದೊಡ್ಡತೋಟ ಆಕ್ಟಿವಾ ಸ್ಕಿಡ್ : ದಂಪತಿ ಜಖಂ

0

ಸುಳ್ಯದ ಕಡೆಯಿಂದ ಗುತ್ತಿಗಾರು ಕಡೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ದೊಡ್ಡತೋಟದಿಂದ ಮುಂದೆ ತಿರುವಿನಲ್ಲಿ ಆಕ್ಟಿವಾ ಸ್ಕಿಡ್ ಆಗಿ ದಂಪತಿ ಜಖಂಗೊಂಡ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.

ಗುತ್ತಿಗಾರಿನ ಮಾಧವರವರು ಚಲಾಯಿಸುತ್ತಿದ್ದ ಆಕ್ಟಿವಾದಲ್ಲಿ ಅವರ ಪತ್ನಿ ಗಿರಿಜಾರವರು ಇದ್ದರು. ಸ್ಕಿಡ್ ಆದ ಪರಿಣಾಮ ಇಬ್ಬರ ಕಾಲು ಜಖಂಗೊಂಡಿದ್ದು, ಸುಳ್ಯದ. ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌ಂದು ತಿಳಿದು ಬಂದಿದೆ.