ಸುಳ್ಯ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಮೆಟ್ರಿಕ್ ಮೇಳ,ವಿಜ್ಞಾನ ದಿನಾಚರಣೆ

0

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ದಲ್ಲಿ ಮೆಟ್ರಿಕ್ ಮೇಳ ಹಾಗೂ ವಿಜ್ಞಾನ ದಿನಾಚರಣೆ ಫೆ.28 ರಂದು ಆಯೋಜಿಸಲಾಗಿತ್ತು. ಎಸ್ ಡಿ ಎಂ ಸಿ ಸದಸ್ಯರು ಹಾಗೂ ಫೋಷಕರು ಶಿಕ್ಷಕರು ಉಪಸ್ಥಿತ ರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಸಿದ್ಧ ವಿಜ್ಞಾನಿಗಳ ಸಂಶೋಧನೆಗಳ ಬಗ್ಗೆ ವಿಷಯಗಳನ್ನು ಪ್ರಸ್ತುತ ಪಡಿಸಿದರು. ವಿಜ್ಞಾನ ದ ವಿವಿಧ ಪ್ರಯೋಗಗಳನ್ನು ಮಾಡಿ ತೋರಿಸಿದರು.

ಮೆಟ್ರಿಕ್ ಮೇಳದಲ್ಲಿ ಮಕ್ಕಳು ತರಕಾರಿ ಹಣ್ಣು ತಿಂಡಿಗಳನ್ನು ತಂದು ಮಾರುವ ಮೂಲಕ ವ್ಯವಹಾರ ಜ್ಞಾನ ಪಡೆದುಕೊಂಡರು.