ಆಲೆಟ್ಟಿ: ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ ದಶ ಸಂಭ್ರಮದ ಆಮಂತ್ರಣ ಪತ್ರ ಬಿಡುಗಡೆ

0

ಆಲೆಟ್ಟಿ ಗ್ರಾಮದ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ 10 ನೇ ವರ್ಷದ ದಶ ಸಂಭ್ರಮದ ಪ್ರಯುಕ್ತ ನಡೆಯಲಿರುವ ಗುಂಡ್ಯ ಟ್ರೋಫಿ -2023, ಕ್ರಿಕೆಟ್ ಮತ್ತು ಪುರುಷರ ಹೊನಲು ಬೆಳಕಿನ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟ ಹಾಗೂ ಗ್ರಾಮದ ಸಾಧಕರಿಗೆ ಜನನಿಶ್ರೀ ಪುರಸ್ಕಾರ ಮತ್ತು ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮ ಮಾ.18 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆಯು ಆಲೆಟ್ಟಿ ಸದಾಶಿವ ದೇವಸ್ಥಾನದ ವಠಾರದಲ್ಲಿ ಮಾ.2 ರಂದು ನಡೆಯಿತು.


ದೇವಸ್ಥಾನದ ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ಪ್ರಾರ್ಥಿಸಿ ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನ್ಯಾಯವಾದಿ ಸತೀಶ್ ಕುಂಭಕ್ಕೋಡು, ಅಚ್ಚುತ ಮಣಿಯಾಣಿ ಆಲೆಟ್ಟಿ, ಶ್ರೀಮತಿ ನಳಿನಿ ರೈ ಆಲೆಟ್ಟಿ, ಪಂಚಾಯತ್ ಸದಸ್ಯೆ ಶ್ರೀಮತಿ ವೀಣಾ ವಸಂತ ಆಲೆಟ್ಟಿ, ಕ್ಲಬ್ ಅಧ್ಯಕ್ಷ ಲತೀಶ್ ಗುಂಡ್ಯ, ಕಾರ್ಯದರ್ಶಿ ಮಹೇಶ್ ಕುತ್ಯಾಳ, ಉಪಾಧ್ಯಕ್ಷ ನಿತಿನ್ ಗುಂಡ್ಯ, ಸುನಿಲ್ ಕುಮಾರ್ ಗುಂಡ್ಯ, ಹರಿಪ್ರಸಾದ್ ಗುಂಡ್ಯ, ಸಚಿನ್ ಗುಂಡ್ಯ,ಸತೀಶ್ ಕುಲಾಲ್ ಆಲೆಟ್ಟಿ, ಯಕ್ಷಿತ್ ಗುಂಡ್ಯ, ಯಶವಂತ, ಕ್ಲಬ್ಬಿನ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.