ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸೋನ ಅಡ್ಕಾರ್ ದ್ವಿತೀಯ

0

ಅಂಡಮಾನ್ ನಿಕೋಬಾರ್ ಐಸ್ ಲ್ಯಾಂಡ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್,ಯೋಗ ಕಲ್ಚರಲ್ ಸೊಸೈಟಿ ಹಾಗೂ ಇಂಟರ್ ನ್ಯಾಷನಲ್ ಯೂತ್ ಯೋಗ ಫೆಡರೇಷನ್ ಇವರು ಜನವರಿಯಲ್ಲಿ ಆನ್ಲೈನ್ ಮೂಲಕ ನಡೆಸಿದ 7 ನೇ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆ 2022-23 ಈ ಸ್ಪರ್ಧೆಯಲ್ಲಿ 9 ರಿಂದ 12 ವಯೋಮಾನದ ಬಾಲಕಿಯರ ವೈಯಕ್ತಿಕ ವಿಭಾಗದ ಯೋಗಾಸನ ಸ್ಪರ್ದೆಯಲ್ಲಿ ಸೋನ ಅಡ್ಕಾರ್ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಇವರು ಶರತ್ ಅಡ್ಕಾರ್ ಹಾಗೂ ಶೋಭಾ ದಂಪತಿಗಳ ಪುತ್ರಿ. ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯದ ಯೋಗ ಶಿಕ್ಷರರಾದ ಸಂತೋಷ್ ಮುಂಡಕಜೆಯವರ ಬಳಿ ತರಬೇತಿ ಪಡೆದಿರುತ್ತಾರೆ.